ಒಮಿಕ್ರಾನ್ ವಿರುದ್ಧ ಹೋರಾಡಲು ಇಲ್ಲಿದೆ ಉಪಾಯ

ಮಂಗಳವಾರ, 4 ಜನವರಿ 2022 (18:39 IST)
ಕೊರೊನಾ ಲಸಿಕೆಯನ್ನು ಪಡೆಯುವುದು ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು ಬಹಳ ಮುಖ್ಯ.

ಆಗ ಮಾತ್ರ ವೈರಸ್ಗಳ ವಿರುದ್ಧ ನಾವು ಹೋರಾಡಲು ಸಾಧ್ಯ. ಕೊವಿಡ್-19 ಸೋಂಕಿನಿಂದ ದೂರ ಇರಲು ಆಹಾರ, ವ್ಯಾಯಾಮ, ನಿದ್ರೆ ಮತ್ತು ಹೆಚ್ಚು ಸಕ್ರಿಯ ಜೀವನಶೈಲಿಯೊಂದಿಗೆ ಕಾಲ ಕಳೆಯುವುದು ಬಹಳ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಟಿ-ಕೋಶಗಳು ಸೋಂಕಿನಿಂದ ದೂರ ಇರಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಕೊವಿಡ್- 19ನ ಹೊಸ ತಳಿಗಳಿಂದ ದೂರ ಇರಲು ಟಿ- ಕೋಶಗಳು ಪ್ರಮುಖ ಪಾತ್ರವಾಹಿಸುತ್ತದೆ.

ವಿಟಮಿನ್ ಡಿ

ಪ್ರತಿರಕ್ಷಣಾ ವ್ಯವಸ್ಥೆ, ಸೋಂಕು ತಡೆಗಟ್ಟುವಿಕೆ ಮತ್ತು ಚೇತರಿಕೆಗೆ ವಿಟಮಿನ್ ಡಿ ಅತ್ಯಗತ್ಯ. ವಿಟಮಿನ್ ಡಿ ಹೆಚ್ಚಳಕ್ಕೆ ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯಿರಿ ಎಂದು ಕುಟಿನ್ಹೋ ಹೇಳಿದ್ದಾರೆ.

ನಿದ್ರೆ

ನಿದ್ರೆ ಪಡೆಯುವುದು ಬಹಳ ಮುಖ್ಯ. ಏಕೆಂದರೆ ಇದು ಮರುದಿನ ಹೆಚ್ಚು ಶಕ್ತಿ ಮತ್ತು ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ. ಜತೆಗೆ ರೋಗನಿರೋಧಕ ಶಕ್ತಿ ನಮ್ಮಲ್ಲಿ ಹೆಚ್ಚಾಗಲು ನಿದ್ರೆ ಬಹಳ ಮುಖ್ಯ. ಒಟ್ಟಾರೆ ದೇಹ ಮತ್ತು ಮನಸ್ಸನ್ನು  ಪುನರ್ಯೌವನಗೊಳಿಸುತ್ತದೆ.

ವ್ಯಾಯಾಮ

ಮಿತವಾಗಿ ವ್ಯಾಯಾಮ ಮಾಡುವುದು, ಆಹಾರ ಸೇವನೆ ಮತ್ತು ಸಕ್ರಿಯವಾಗಿರುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ, ಶುಂಠಿ, ಗರಂ ಮಸಾಲಾ, ಅರಿಶಿಣ, ಜೇನುತುಪ್ಪ, ತುಳಸಿ, ನೆಲ್ಲಿಕಾಯಿ, ಅಮೃತಬಳ್ಳಿ, ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ವಿಟಮಿನ್ ಸಿ ಭರಿತ ಆಹಾರಗಳು ಮತ್ತು ಸತುಭರಿತ ಆಹಾರಗಳನ್ನು ತಿನ್ನಿ ಎಂದು ತಜ್ಞರು ಶಿಫಾರಸು ಮಾಡುತ್ತಾರೆ.

ಜೀವನಶೈಲಿ

ಉತ್ತಮ ಜೀವನಶೈಲಿಯು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಆದಷ್ಟು ಧೂಮಪಾನ, ಮದ್ಯಪಾಲದಿಂದ ದೂರ ಇರಿ. ಉತ್ತಮ ಜೀವನಶೈಲಿಯನ್ನು ಮೈಗೂಡಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ