ಅಸ್ತಮಾ ರೋಗಕ್ಕೆ ಮನೆಯಲ್ಲೇ ಈ ಮದ್ದು ಮಾಡಿ ನೋಡಿ!

ಶನಿವಾರ, 6 ಜನವರಿ 2018 (09:15 IST)
ಬೆಂಗಳೂರು: ಇತ್ತೀಚೆಗೆ ವಾತಾವರಣ, ಹವಾಮಾನ ಬದಲಾವಣೆಯಿಂದಾಗಿ ಅಸ್ತಮಾ ಸಾಮಾನ್ಯ ರೋಗವಾಗಿಬಿಟ್ಟಿದೆ. ಇದಕ್ಕೆ ಸ್ಟಿರಾಯ್ಡ್ ಬಳಸುವ ಔಷಧಗಳ ಸೇವನೆ ಬೇಡವೆನಿಸಿದರೆ ಮನೆಯಲ್ಲೇ ಮದ್ದು ಮಾಡಬಹುದು. ಅದಕ್ಕೇನು ಪರಿಹಾರ ನೋಡೋಣ.

ಈರುಳ್ಳಿ
ಆದಷ್ಟು ಈರುಳ್ಳಿ ಸೇವಿಸಿ. ಇದು ಶ್ವಾಸನಾಳಗಳಲ್ಲಿ ಸುಲಲಿತವಾಗಿ ವಾಯು ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ.

ನಿಂಬೆ ಹಣ್ಣು
ನಿಂಬೆ ರಸಕ್ಕೆ ಸ್ವಲ್ಪ ಸಕ್ಕರೆ ಬೆರೆಸಿಕೊಂಡು ಪ್ರತಿನಿತ್ಯ ಸೇವಿಸುತ್ತಿರಿ. ಇದರಿಂದ ಅಸ್ತಮಾ ಆಗಾಗ ಬರದು.

ಜೇನು ತುಪ್ಪ
ಪ್ರತಿ ದಿನ ಮಲಗುವ ಮುನ್ನ ಚಕ್ಕೆ ಪುಡಿಯ ಜತೆ ಒಂದು ಸ್ಪೂನ್ ಜೇನು ತುಪ್ಪ ಸೇರಿಸಿಕೊಂಡು ಸೇವಿಸುತ್ತಿರಿ.

ಶುಂಠಿ ಸಿರಪ್
ಪ್ರತಿ ನಿತ್ಯ ಒಂದು ಲೋಟ ನೀರಿಗೆ ಕೆಲವು ಶುಂಠಿ ಹೋಳುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಸಿರಪ್ ಮಾಡಿಕೊಂಡು ಕುಡಿಯಿರಿ.

ಬೆಳ್ಳುಳ್ಳಿ
ಪ್ರತಿ ನಿತ್ಯ ಅರ್ಧ ಲೋಟ ಹಾಲಿಗೆ ಮೂರರಿಂದ ನಾಲ್ಕು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಹಾಕಿ ಕುಡಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ