ಜ್ವರ ಬಂದಿದೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ ನೋಡಿ

ಸೋಮವಾರ, 5 ನವೆಂಬರ್ 2018 (06:36 IST)
ಬೆಂಗಳೂರು: ಚಳಿಗಾಲ ಬಂತೆಂದರೆ, ಶೀತ, ಕೆಮ್ಮು ಜ್ವರ ಸಾಮಾನ್ಯ. ಜ್ವರ ಬಂದಿದ್ದರೆ ತಕ್ಷಣಕ್ಕೆ ವೈದ್ಯರ ಬಳಿ ಓಡುವ ಮೊದಲು ಈ ಮನೆ ಮದ್ದುಗಳನ್ನು ಮಾಡಿ ನೋಡಿ.

ಜೇನು ತುಪ್ಪ
ಜೇನು ತುಪ್ಪದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಗಂಟಲು ನೋವು, ಕೆಮ್ಮು ಕಡಿಮೆ ಮಾಡುವ ಅಂಶಗಳು ಹೇರಳವಾಗಿದೆ.

ಶುಂಠಿ
ಜ್ವರ ಬಂದಾಗ ಶುಂಠಿ ಟೀ ಮಾಡಿಕೊಂಡು ಕುಡಿಯಿರಿ. ಶುಂಠಿಯಲ್ಲಿ ಶೀತ ಸಂಬಂಧೀ ಸಮಸ್ಯೆಗಳನ್ನು ದೂರ ಮಾಡುವ ಗುಣವಿದೆಯೆಂದು ಹಲವು ಅಧ‍್ಯಯನಗಳೇ ಹೇಳಿವೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಅಂಶವು ರೋಗನಿರೋಧಕ ಮತ್ತು ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಇದು ಶೀತ, ಕೆಮ್ಮಿಗೆ ಉತ್ತಮ.

ನಿಂಬೆ ಹುಳಿ
ಜ್ವರ ಬಂದಾಗ ನಿಂಬೂ ಪಾನೀಯ ಸೇವಿಸುವುದು ಉತ್ತಮ. ಇದರಲ್ಲಿರುವ ವಿಟಮಿನ್ ಸಿ ಅಂಶ ಶೀತ ಸಂಬಂಧೀ ಸಮಸ್ಯೆಯನ್ನು ದೂರ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ