ವಾಂತಿ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ!

ಶನಿವಾರ, 4 ನವೆಂಬರ್ 2017 (08:48 IST)
ಬೆಂಗಳೂರು: ಅದೇನೋ ಹಾಳು ಮೂಳು ತಿಂದುಕೊಂಡು ಬಂದು ಹೊಟ್ಟೆ ಹಾಳಾಗಿದೆಯೇ? ವಾಂತಿ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಅದಕ್ಕೆ ಸುಲಭ ಪರಿಹಾರವಿದೆ.

 
ಶುಂಠಿ
ಶುಂಠಿ ನಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ವಸ್ತು. ಇದು ಹಲವು ರೋಗಗಳಿಗೆ ಮನೆ ಮದ್ದು. ಹಾಗೆಯೇ ವಾಂತಿಯಾಗುತ್ತಿದ್ದರೆ ಹಸಿ ಶುಂಠಿ ಸೇವಿಸಿ ಅಥವಾ ಅಡುಗೆಯಲ್ಲಿ ಹೆಚ್ಚು ಬಳಸಿ.

ಪುದೀನಾ
ಪುದೀನಾ ಜೀರ್ಣ ಕ್ರಿಯೆಗೆ ಉತ್ತಮ. ಇದು ನಮ್ಮ ಹೊಟ್ಟೆಯ ಮಾಂಸ ಖಂಡಗಳನ್ನು ಸಡಿಲಗೊಳಿಸುವುದು ಕೂಡಾ. ಹಾಗಾಗಿ ಪುದೀನಾ ಎಲೆಗಳನ್ನು ಕುದಿಯುವ ನೀರಿಗೆ ಹಾಕಿಕೊಂಡು ಸೇವಿಸುವುದು ಒಳ್ಳೆಯದು.

ನಿಂಬೆ ಹಣ್ಣು
ನಿಂಬೆ ಹಣ್ಣಿನಲ್ಲಿರುವ ಸಿಟ್ರಸ್ ಅಂಶ ವಾಂತಿ ನಿಯಂತ್ರಿಸುತ್ತದೆ. ಹಾಗಾಗಿ ವಾಂತಿ ಬರುವಂತಿದ್ದರೆ ನಿಂಬೆ ಹಣ್ಣಿನ ಸುವಾಸನೆ ಸವಿಯುತ್ತಿರಿ. ಅಥವಾ ನಿಂಬೆ ರಸಕ್ಕೆ ಸ್ವಲ್ಪ ಜೇನು ತುಪ್ಪ ಹಾಗೂ ನೀರು ಸೇರಿಸಿಕೊಂಡು ಕುಡಿಯುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ