ವಸಡಿನ ಸಮಸ್ಯೆಗೂ ರಕ್ತದೊತ್ತಡಕ್ಕೂ ಸಂಬಂಧವಿದೆಯಂತೆ!
ಇಟೆಲಿಯ ಸಂಶೋಧಕರು ಅಮೆರಿಕಾದ ಜನರ ಮೇಲೆ ಸಮೀಕ್ಷೆ ನಡೆಸಿ ಇಂತಹದ್ದೊಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಹೆಚ್ಚು ವಸಡಿನ ಸಮಸ್ಯೆ ಇರುವವರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಾರಂತೆ.
ಅಂದರೆ ವಸಡಿನ ರಕ್ತಸ್ರಾವ, ನೋವು ಮುಂತಾದ ಸಮಸ್ಯೆ ಇರುವವರಲ್ಲಿ ಹೈಪರ್ ಟೆನ್ಷನ್ ಜಾಸ್ತಿ. ಅಲ್ಲದೆ, ಇಂತಹ ಸಮಸ್ಯೆ ಇರುವವರು ರಕ್ತದೊತ್ತಡಕ್ಕೆ ನೀಡುವ ಚಿಕಿತ್ಸೆಗೆ ಬೇಗನೇ ಸ್ಪಂದಿಸುವುದಿಲ್ಲ ಎಂದು ಅಧ್ಯಯನ ವರದಿ ಹೇಳಿದೆ.