ಬೆವರಿನ ವಾಸನಿಯಿಂದ ಮುಕ್ತಿ ಹೊಂದಲು ಹೀಗೆ ಮಾಡಿ

ಭಾನುವಾರ, 23 ಸೆಪ್ಟಂಬರ್ 2018 (06:37 IST)
ಬೆಂಗಳೂರು : ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಕೆಲವೊಮ್ಮೆ ಡಿಯೋಡರೆಂಟ್ ಖಾಲಿಯಾಗಿರುತ್ತೆ. ಅಂದೇ ಪಾರ್ಟಿಗೆ ಹೋಗುವ ಸಂದರ್ಭ ಬರುತ್ತೆ. ಆಗ ಚಿಂತೆ ಪಡಬೇಕಾಗಿಲ್ಲ. ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು.


ಪ್ರತಿ ದಿನ ಸ್ನಾನ ಮಾಡುವ ನೀರಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ. ನಿಂಬೆ ರಸ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ದುರ್ಗಂಧ ಕಡಿಮೆಯಾಗಿ ಇಡೀ ದಿನ ನೀವು ಫ್ರೆಶ್ ಆಗಿರುವಂತೆ ಮಾಡುತ್ತದೆ.


ಡಿಯೋ ಬದಲು ನೀವು ಹ್ಯಾಂಡ್ ಸ್ಯಾನಿಟೈಜರ್ ಬಳಸಬಹುದು. ಇದು ದುರ್ಗಂಧವನ್ನುಂಟು ಮಾಡುವ ಬ್ಯಾಕ್ಟೀರಿಯಾದಿಂದ ಮುಕ್ತಿ ನೀಡುತ್ತದೆ.


ಎರಡು ಚಮಚ ಬೇಕಿಂಗ್ ಸೋಡಾಕ್ಕೆ ಜೋಳದ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಅಂಡರ್ ಆರ್ಮ್ ಗೆ ಹಚ್ಚುವುದರಿಂದಲೂ ದುರ್ಗಂಧ ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ