ಬೇಳೆ ಕಾಳುಗಳು ಬೇಯಿಸಿದಾಗ ಗ್ಯಾಸ್ಟ್ರಿಕ್ ಆಗದಂತೆ ತಡೆಯಲು ಏನು ಮಾಡಬೇಕು ಗೊತ್ತಾ?

ಸೋಮವಾರ, 10 ಜುಲೈ 2017 (14:48 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಜನ ಬೇಳೆ ಕಾಳುಗಳನ್ನು ಬೇಯಿಸಿ ತಿನ್ನಲೂ ಹೆದರುವಂತಾಗಿದೆ. ಅದಕ್ಕೆ ಕಾರಣ ಗ್ಯಾಸ್ಟ್ರಿಕ್. ಆದರೆ ಬೇಳೆ ಕಾಳುಗಳಲ್ಲಿರುವ ಗ್ಯಾಸ್ಟ್ರಿಕ್ ಉಂಟುಮಾಡುವ ಅಂಶವನ್ನು ತೆಗೆಯಬಹುದು.


ಹೌದು. ತಜ್ಞರ ಪ್ರಕಾರ ಬೇಳೆ ಕಾಳುಗಳಲ್ಲಿ ಗ್ಯಾಸ್ಟ್ರಿಕ್ ಗೆ ಕಾರಣವಾಗುವುದು ಅದರಲ್ಲಿರುವ ಲೆಕ್ಟೆಮ್ ಅಂಶ. ಅದನ್ನು ತೆಗೆದರೆ ಬೇಳೆ ಕಾಳುಗಳನ್ನು ತಿನ್ನಲು ಹಿಂದು ಮುಂದು ನೋಡಬೇಕಿಲ್ಲ ಎಂದಿದ್ದಾರೆ ತಜ್ಞರು. ಅದನ್ನು ತೆಗೆಯುವುದು ಹೇಗೆ?

ಅದು ತುಂಬಾ ಸಿಂಪಲ್. ಬೇಳೆ ಕಾಳುಗಳನ್ನು ನಾವು ಹೇಗಿದ್ದರೂ ಸ್ವಲ್ಪ ಹೊತ್ತು ನೆನೆಸಿಟ್ಟೇ ಬೇಯಿಸುತ್ತೇವೆ. ಅಷ್ಟಕ್ಕೂ ಆ ಲೆಕ್ಟೆಮ್ ಅಂಶ ಹೋಗದಿದ್ದರೆ, ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಬೇಯಿಸಿದರೆ ತಿಂದರೆ ಸಾಕು. ಗ್ಯಾಸ್ಟ್ರಿಕ್ ಸಮಸ್ಯೆ ಅಷ್ಟಾಗಿ ಕಾಡದು ಎಂಬುದು ತಜ್ಞರ ಅಭಿಪ್ರಾಯ. ಮಾಡಿ ನೋಡಿ.

ಇದನ್ನೂ ಓದಿ.. ಶಾಕಿಂಗ್! ರಿಲಯನ್ಸ್ ಜಿಯೋಗೆ ಹ್ಯಾಕಿಂಗ್ ಹಾವಳಿ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ