ಮಕ್ಕಳಿಗೆ ಪದೇಪದೇ ಶೀತ, ಕಫ, ಕೆಮ್ಮುವಿನ ಸಮಸ್ಯೆ ಕಾಡುತ್ತಿದ್ದರೆ ಇದನ್ನು ತಿನ್ನಿಸಿ
ಗುರುವಾರ, 8 ಆಗಸ್ಟ್ 2019 (09:16 IST)
ಬೆಂಗಳೂರು : ಚಿಕ್ಕಮಕ್ಕಳಿಗೆ 6 ವರ್ಷದ ತನಕ ಪದೇ ಪದೇ ಇನ್ ಫೆಕ್ಷನ್ ಆಗುತ್ತಿರುತ್ತದೆ. ಪದೇ ಪದೇ ಶೀತ, ಕಫ, ಕೆಮ್ಮುವಿನ ಸಮಸ್ಯೆ ಕಾಡುತ್ತಿರುತ್ತದೆ. ಇದನ್ನು ತಡೆಗಟ್ಟಲು ಮಕ್ಕಳಿಗೆ ಇದನ್ನು ನೀಡಿ.
ಕಾಳುಮೆಣಸು , ಹಿಪ್ಪಲಿ ಎರಡನ್ನು ತೇದಿ ಪೇಸ್ಟ್ ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಮಕ್ಕಳಿಗೆ ತಿನ್ನಿಸಿದರೆ ಶೀತ ಕಫ, ಕೆಮ್ಮು ತಡೆಗಟ್ಟಬಹುದು.
ಆದರೆ ಇದನ್ನು 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಮಾತ್ರ ನೀಡಿ. ಚಿಕ್ಕ ಮಕ್ಕಳಿಗೆ ಮೆಂತೆಕಾಳಿನ ಗಾತ್ರದಷ್ಟು ಮಾತ್ರ ಈ ಪೇಸ್ಟ್ ನ್ನು ನೀಡಿ, ಸ್ವಲ್ಪ ದೊಡ್ಡ ಮಕ್ಕಳಿಗೆ ¼ ಚಮಚದಷ್ಟು ನೀಡಬಹುದು. ಇದರಿಂದ ಮಕ್ಕಳ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಹಾಗೂ ಹಸಿವು ಹೆಚ್ಚಾಗುತ್ತದೆ. ಆದರೆ ಇದನ್ನು ಜಾಸ್ತಿ ನೀಡಿದರೆ ಮಕ್ಕಳ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಬಹುದು.