ತೂಕ ಇಳಿಸಿಕೊಳ್ಳಲು ನೀರಿಗೆ ಈ 3 ಮೂರು ವಸ್ತುಗಳನ್ನು ಮಿಕ್ಸ್ ಮಾಡಿ ಕುಡಿಯಿರಿ

ಗುರುವಾರ, 8 ಆಗಸ್ಟ್ 2019 (09:11 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಹಾಗೂ ತಿನ್ನುವ ಆಹಾರದಿಂದ  ಹೆಚ್ಚಿನವರು  ದಪ್ಪವಾಗುತ್ತಿದ್ದಾರೆ. ಕೊನೆಗೆ ಈ ತೂಕವನ್ನು ಇಳಿಸಿಕೊಳ್ಳಬೇಕೆಂದು ಹರಸಾಹಸ ಪಡುತ್ತಾರೆ. ಊಟ ತಿಂಡಿ ಬಿಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತಾರೆ.
ಅದರ ಬದಲು ನೀರಿಗೆ ಈ 3 ಮೂರು ವಸ್ತುಗಳನ್ನು ಮಿಕ್ಸ್ ಮಾಡಿ ಕುಡಿದರೆ ಯಾವುದೇ ರೀತಿಯ ವ್ಯಾಯಾಮ, ಡಯೆಟ್ ಇಲ್ಲದೆ ಆರೋಗ್ಯವಾಗಿ ದೇಹದ ತೂಕವನ್ನು ಒಂದೇ ವಾರದಲ್ಲಿ ಇಳಿಸಿಕೊಳ್ಳಬಹುದು.


1 ನಿಂಬೆ ಹಣ್ಣನ್ನು ಸಣ್ಣ ಸಣ್ಣ ಪೀಸ್ ಮಾಡಿಕೊಂಡು 1 ಗ್ಲಾಸ್ ನೀರಿಗೆ ಹಾಕಿ, ಅದಕ್ಕೆ 1 ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. 1 ಗ್ಲಾಸ್ ನೀರು ½ ಗ್ಲಾಸ್ ಆಗುವ ತನಕ ಕುದಿಸಿ. ಬಳಿಕ ಅದನ್ನು ಕೆಳಗಿಳಿಸಿ ತಣ್ಣಗಾದ ಮೇಲೆ ಅದಕ್ಕೆ 1 ಚಮಚ ಜೇನು ತುಪ್ಪ ಬೇರೆಸಿ ಕುಡಿದರೆ ಒಂದೇ ವಾರದಲ್ಲಿ ನಿಮ್ಮ ತೂಕ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ