ಈ ಗಿಡಗಳು ಮನೆಯಲ್ಲಿದ್ದರೆ ಸೊಳ್ಳೆಗಳು ಪರಾರಿಯಾಗುತ್ತವೆಯಂತೆ!
ಸೋಮವಾರ, 26 ಮಾರ್ಚ್ 2018 (06:37 IST)
ಬೆಂಗಳೂರು : ಇತ್ತಿಚೆಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು,. ಎಲ್ಲೆಂದರಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತವೆ. ಇವುಗಳಿಂದ ನಾವು ಡೆಂಗ್ಯೂ, ಟೈಫಾಯಿಡ್, ಮಲೇರಿಯಾದಂತಹ ವಿಷಮ ಜ್ವರಗಳಿಂದ ನರಳಬೇಕಾಗುತ್ತದೆ. ಆದರೆ ಈ ಅನಾರೋಗ್ಯಕ್ಕೆ ತುತ್ತಾಗಬಾರದು ಎಂಬ ಉದ್ದೇಶದಿಂದಲೇ ಬಳಷ್ಟು ಮಂದಿ ಮಸ್ಕಿಟೋ ರಿಪೆಲ್ಲೆಂಟ್‌ಗಳನ್ನು ,ಸೊಳ್ಳೆ ಪರದೆಗಳನ್ನು ಬಳಸುತ್ತಾರೆ. ಆದರೆ ಈ ಕೆಳಗಿನ ಗಿಡಗಳನ್ನು ಮನೆಯಲ್ಲಿ ಬೆಳೆಸಿಕೊಂಡರೆ ಸೊಳ್ಳೆಗಳನ್ನು ಓಡಿಸಬಹುದು. ಯಾಕೆಂದರೆ ಈ ಗಿಡಗಳಿಗೆ ಬಿಡುವ ಹೂಗಳು ನಿಮ್ಮ ಮನೆಯೊಳಕ್ಕೆ ಸೊಳ್ಳೆಗಳು ಬರದಂತೆ ತಡೆಯುತ್ತವೆ. ಸೊಳ್ಳೆಗಳನ್ನು ನಿವಾರಿಸುತ್ತವೆ.
ತುಳಸಿ : ಇದು ಅನಾರೋಗ್ಯ ಸಮಸ್ಯೆಗಳಷ್ಟೇ ಅಲ್ಲ, ಸೊಳ್ಳೆಗಳನ್ನು ಓಡಿಸುವ ಶಕ್ತಿ ಸಹ ತುಳಸಿಗೆ ಇದೆ. ಇವುಗಳ ಹೂವುಗಳು ಸೊಳ್ಳೆಗಳನ್ನು ದೂರ ಓಡಿಸುತ್ತವೆ. ಆದಕಾರಣ ತುಳಸಿ ಗಿಡಗಳನ್ನು ಬೆಳೆಸಿಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು.
ಲವಂಗ ಗಿಡ: ಲವಂಗ ಗಿಡದ ಎಲೆಗಳಿಂದ ಬರುವ ವಾಸನೆ ಅಷ್ಟೇ ಅಲ್ಲ, ಈ ಗಿಡದ ಹೂವುಗಳು ಸಹ ಸೊಳ್ಳೆಗಳನ್ನು ಓಡಿಸುತ್ತವೆ. ಆದಕಾರಣ ಈ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಉಪಯುಕ್ತ. ಆದರೆ ಲವಂಗ ಎಣ್ಣೆಯನ್ನು ನಿದ್ರಿಸುವ ಮುನ್ನ ಚರ್ಮಕ್ಕೆ ಹಚ್ಚಿಕೊಂಡರೆ ಆ ವಾಸನೆಗೂ ಸೊಳ್ಳೆಗಳು ಹತ್ತಿರ ಸುಳಿಯಲ್ಲ.
ಚಂಡು ಹೂವು
ಚೆಂಡು ಹೂವಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು. ಚೆಂಡು ಹೂಗಳನ್ನು ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚದಂತೆ ಇರುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ