ಖಾಸಗಿ ಭಾಗದಲ್ಲಿ ಬ್ಯಾಕ್ಟೀರಿಯಾದಿಂದ ಅಲರ್ಜಿಯಾಗಿದ್ದರೆ ಇದನ್ನು ಹಚ್ಚಿ

ಮಂಗಳವಾರ, 17 ನವೆಂಬರ್ 2020 (16:55 IST)
ಬೆಂಗಳೂರು: ಕೆಮಿಕಲ್ ಯುಕ್ತ ವಸ್ತುಗಳನ್ನು ಹಾಗೂ ಒದ್ದೆಯಾದ ಒಳಉಡುಪುಗಳನ್ನು ಬಳಸುವುದರಿಂದ  ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿ ಖಾಸಗಿ ಭಾಗದಲ್ಲಿ ಅಲರ್ಜಿಯಾಗಿ ತುರಿಕೆ ಉಂಟಾಗುತ್ತದೆ. ಇದರಿಂದ ಕೆಲವೊಮ್ಮೆ ಖಾಸಗಿ ಭಾಗದಲ್ಲಿ ವಾಸನೆ ಬರುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

 ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಆದರೆ ಇದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿದರೆ ಸುಡುವ ಅನುಭವವಾಗುತ್ತದೆ. ಹಾಗಾಗಿ ಇದಕ್ಕೆ ತೆಂಗಿನೆಣ್ಣೆ, ಬಾದಾಮಿ ಅಥವಾ ಆಲಿವ್ ಆಯಿಲ್ ಮಿಕ್ಸ್ ಮಾಡಿ ಹಚ್ಚಿ.
ಮೊಸರು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೊಡೆದೊಡಿಸುತ್ತದೆ. ಹಾಗಾಗಿ ಖಾಸಗಿ ಭಾಗದಲ್ಲಿ ಅಲರ್ಜಿಯಾದರೆ ಮೊಸರನ್ನು ಹಚ್ಚಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ