ಹೀಗೆ ಮಾಡಿದರೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆಯಂತೆ ಹುಷಾರು!

ಗುರುವಾರ, 9 ಆಗಸ್ಟ್ 2018 (12:52 IST)
ಬೆಂಗಳೂರು: ಇಂದಿನ ಜೀವನ ಶೈಲಿ, ಆಹಾರ ಕ್ರಮದಿಂದ, ಒತ್ತಡದ ಜೀವನದಿಂದಾಗಿ ಬೇಗನೇ ಹೃದಯ ಸಂಬಂಧಿ ಕಾಯಿಲೆ ಕಂಡುಬರುತ್ತದೆ. ದೇಹದಲ್ಲಿ ಬೊಜ್ಜು ಹೇರುವುದರಿಂದ ಸಾಕಷ್ಟು ಕಾಯಿಲೆ ಕೂಡ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಎಲ್ಲರಿಗೂ ಭಯ ತರಿಸುವ ಕಾಯಿಲೆ ಎಂದರೆ ಹೃದಯ ಸಂಬಂಧಿ ಕಾಯಿಲೆ.


ಅವಶ್ಯಕತೆಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆಯಂತೆ. ಸರಿಯಾಗಿ ನಿದ್ದೆ ಮಾಡದಿದ್ದರೆ, ಹೃದಯದ ಕಾಯಿಲೆ ಬರಬಹುದೆಂದು ಸಂಶೋಧಕರು ಹೇಳಿದ್ದಾರೆ.


20-39 ವರ್ಷ ವಯೋಮಿತಿಯ 26 ಮಂದಿಯನ್ನು ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿದ್ದು, ಅವರಿಗೆ ಕೇವಲ 5 ಗಂಟೆ ಮಾತ್ರ ನಿದ್ದೆ ಮಾಡಲು ಹೇಳಲಾಗಿದೆ. ಅದರಿಂದ ಆಗಬಹುದಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದಾಗ, ಸರಿಯಾಗಿ ನಿದ್ದೆ ಮಾಡದವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದಾದ ಸಾಧ್ಯತೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಹಾಗಾಗಿ ಇನ್ನು ಮುಂದೆ ಎಂಟು ಗಂಟೆಯಾದರೂ ಚೆನ್ನಾಗಿ ನಿದ್ದೆ ಮಾಡಿ ಖಾಯಿಲೆಯಿಂದ ದೂರವಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ