ಎಚ್ಚರ! ಅಡುಗೆಗೆ ಮಿತಿ ಮೀರಿ ಅರಶಿನ ಬಳಸಿದರೆ ಅಪಾಯ ಖಂಡಿತ

ಮಂಗಳವಾರ, 16 ಅಕ್ಟೋಬರ್ 2018 (11:02 IST)
ಬೆಂಗಳೂರು : ಅರಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ. ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಅಡುಗೆಗೆ ಅರಿಶಿನವನ್ನು ಹೆಚ್ಚು ಬಳಸಿದರೆ ಅಪಾಯ ಇದರಿಂದ ಹಲವು ರೋಗಗಳು ಬರುತ್ತದೆಯಂತೆ. ಅರಸಿನವೂ ಹೆಚ್ಚು ಸೇವಿಸಿದರೆ ಉಂಟಾಗುವ  ತೊಂದರೆಗಳು ಯಾವುವು ಎಂಬುದು ಇಲ್ಲಿದೆ ನೋಡಿ.


* ಅರಿಶಿನವನ್ನು ಹೆಚ್ಚಾಗಿ ಬಳಸಿದರೆ ನಿಮಗೆ ಜ್ವರದ ಸಮಸ್ಯೆ ಕಾಣಿಸಿಕೊಳ್ಳಬಹುದು ಆದೊಷ್ಟು ಮಿತವಾಗಿ ಬಳಸಿ.

* ಒಂದು ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಅರಸಿನ ಪುಡಿ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಹೊಟ್ಟೆ ಹಾಳು ಮಾಡುತ್ತದೆ. ಹೆಚ್ಚು ಅರಸಿನ ಪುಡಿ ಸೇವಿಸುವುದರಿಂದ ಕೆಳಹೊಟ್ಟೆ ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.

* ಅರಸಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದರಿಂದ ಜೀರ್ಣಸಂಬಂಧಿ ಸಮಸ್ಯೆಗಳುಂಟಾಗಬಹುದು. ಇದರಿಂದ ತಲೆಸುತ್ತು, ಬೇಧಿ ಸಮಸ್ಯೆ ಕಾಣಿಸಿಕೊಳ್ಳಬಹುದು.

* ಅರಸಿನದಲ್ಲಿರುವ ಕೆಲವು ಅಂಶಗಳಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು. ಕಜ್ಜಿ, ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ