ಓಟ್ಸ್ ಕಿಚಡಿ

ಸೋಮವಾರ, 15 ಅಕ್ಟೋಬರ್ 2018 (18:17 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* 1 ಕಪ್ ಓಟ್ಸ್
* 1/2 ಕಪ್ ಹೆಸರುಬೇಳೆ
* 1 ಟೀ ಚಮಚ ಜೀರಿಗೆ
* ಶುಂಠಿ ಸ್ವಲ್ಪ
* ಹಸಿಮೆಣಸಿನಕಾಯಿ
* ಈರುಳ್ಳಿ
* 1 ಕ್ಯಾರೆಟ್
* 2 ಟೊಮೆಟೊ
* 5 ರಿಂದ 6 ಹುರುಳಿಕಾಯಿ
* 1 ಕ್ಯಾಪ್ಸಿಕಂ
* 1/2 ಕಪ್ ಬಟಾಣಿ
* 5 ರಿಂದ 6 ಕಪ್ ನೀರು
* 1/2 ಟೀ ಚಮಚ ಅರಿಶಿನ ಪುಡಿ
* ಚಿಟಿಕೆಯಷ್ಟು ಇಂಗು
*  2 ರಿಂದ 3 ಟೀ ಚಮಚ ತುಪ್ಪ
* ಸ್ವಲ್ಪ ಕರಿಬೇವು ಎಲೆ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 
ಮೊದಲು ಕುಕ್ಕರಿನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ಅದಕ್ಕೆ ಜೀರಿಗೆ ಮತ್ತು ಇಂಗನ್ನು ಹಾಕಿ. ನಂತರ ಶುಂಠಿ ಮತ್ತು ಕರಿಬೇವು ಎಲೆಗಳನ್ನು ಹಾಕಿ ಹುರಿಯಬೇಕು. ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಟೊಮೆಟೊ ಹಾಕಿ ಬಾಡಿಸಬೇಕು. ನಂತರ ತರಕಾರಿಗಳನ್ನು ಹಾಕಿ 2 ರಿಂದ 3 ನಿಮಿಷದವರೆಗೆ ಹುರಿಯಬೇಕು.

ನಂತರ ಹುರಿದ ಪದಾರ್ಥಗಳಿಗೆ ಈಗಾಗಲೇ ತೊಳೆದಿಟ್ಟ ಹೆಸರುಬೇಳೆಯನ್ನು ಹಾಕಬೇಕು. ಅದಕ್ಕೆ ಅರಿಶಿನ ಪುಡಿಯನ್ನು ಸೇರಿಸಿ 2 ನಿಮಿಷ ಹುರಿಯಬೇಕು. ನಂತರ ಹುರಿದ ಪದಾರ್ಥಕ್ಕೆ 5 ರಿಂದ 6 ಕಪ್ ನೀರನ್ನು ಹಾಕಿ ಕುಕ್ಕರ್ ಅನ್ನು ಮುಚ್ಚಬೇಕು. 2 ವಿಷಲ್ ಬಂದ ನಂತರ ಒಲೆಯನ್ನು ಆರಿಸಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದರೆ ಆರೋಗ್ಯಕರವಾದ ರುಚಿಕರವಾದ ಓಟ್ಸ್ ಕಿಚಡಿ ಸವಿಯಲು ಸಿದ್ಧ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ