ಸುಂದರ ತ್ವಚೆ ನಿಮ್ಮದಾಗಬೇಕೆಂದರೆ ಹಾಲಿನಿಂದ ಹೀಗೆ ಮಾಡಿ

ಶುಕ್ರವಾರ, 27 ಸೆಪ್ಟಂಬರ್ 2019 (13:45 IST)
ಬೆಂಗಳೂರು: ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಇರುವುದರಿಂದ ಇದು ನಿಮ್ಮ ಮುಖದ ಸೌಂದರ್ಯ ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು.




ಒಂದು ಚಮಚ ಹಾಲು ತೆಗೆದುಕೊಂಡು ನಿಧಾನಕ್ಕೆ ಮುಖದ ಮೇಲೆ ಮಸಾಜ್ ಮಾಡಿದರೆ ಅದು ಮುಖದ ಮೇಲಿರುವ  ಡೆಡ್ ಸ್ಕೀನ್ ಸೆಲ್ಸ್ ಅನ್ನು ತೆಗೆದು ಹಾಕುತ್ತದೆ.


ಹಾಲಿನಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಇರುವುದರಿಂದ ಇದನ್ನು ಫೇಸ್ ಕ್ಲೆನ್ಸರ್ ಆಗಿ ಉಪಯೋಗಿಸಬಹುದು. ಹಸಿ ಹಾಲನ್ನು ತೆಗೆದುಕೊಂಡು ಅದನ್ನು ಫೇಸ್ ಪ್ಯಾಕ್ ತರಹ ಹಚ್ಚಿಕೊಳ್ಳಿ. ಅಥವಾ ಜೇನುತುಪ್ಪ ಜತೆಗೆ ಹಾಲು ಮಿಕ್ಸ್ ಮಾಡಿ ಹಚ್ಚಿಕೊಂಡರೆ ಮುಖವು ತಾಜಾತನದಿಂದ ಕೂಡಿರುತ್ತದೆ.


ಮುಖದಲ್ಲಿ ಸನ್ ಬರ್ನ್ ಆಗಿದ್ದರೆ ಹಾಲನ್ನು ಹಚ್ಚಿಕೊಂಡು 20 ನಿಮಿಷ ಬಿಟ್ಟು ಮುಖ ತೊಳೆದರೆ ನಿಮಗೆ ಆರಾಮದಾಯಕವೆನಿಸುತ್ತದೆ.ಇದು ಮ್ಯಾಯಿಶ್ಚರೈಸಿಂಗ್ ರೀತಿ ಕಾರ್ಯನಿರ್ವಹಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ