ನಿಮ್ಮ ಮಕ್ಕಳಿಗೆ ಚಹಾ ಕುಡಿಯುವ ಅಭ್ಯಾಸವಿದ್ದರೆ ಈಗಲೇ ನಿಲ್ಲಿಸಿಬಿಡಿ. ಯಾಕೆ ಗೊತ್ತಾ?
ಭಾನುವಾರ, 9 ಸೆಪ್ಟಂಬರ್ 2018 (06:26 IST)
ಬೆಂಗಳೂರು : ಕೆಲವರು ತಮ್ಮ ಮಕ್ಕಳಿಗೆ ಚಹಾ ಕುಡಿಯುವ ಅಭ್ಯಾಸ ಮಾಡಿರುತ್ತಾರೆ. ಅಂತವರು ಈ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ಯಾಕೆಂದರೆ ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಅಪಾಯ.
ಚಹಾದಲ್ಲಿರುವ ಅಂಶಗಳು ಮಕ್ಕಳ ಮೂಳೆ ಕ್ಯಾಲ್ಸಿಯಂ ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಚಹಾ ಸೇವನೆಯಿಂದ ಮೆದುಳು, ಸ್ನಾಯುಗಳು, ರಕ್ತನಾಳಗಳ ಮತ್ತು ಒಟ್ಟಾರೆ ಶರೀರದ ಬೆಳವಣಿಗೆಗೂ ಬಾಧತೆ ಉಂಟಾಗುತ್ತದೆ. ಪರಿಣಾಮ ಮಕ್ಕಳ ಮೂಳೆಗಳು ಬಲಹೀನವಾಗುತ್ತದೆ. ಇದರಿಂದ ಮಕ್ಕಳು ದುರ್ಬಲರಾಗುತ್ತಾರೆ. ಇದಕ್ಕಾಗಿಯೇ ಮಕ್ಕಳಲ್ಲಿ ಕೈ ಕಾಲು, ಗಂಟುಗಳ ನೋವು ಕಾಣಿಸಿಕೊಳ್ಳುತ್ತದೆ.
ಇಷ್ಟೇ ಅಲ್ಲ ಏಕಾಗ್ರತೆ ಮತ್ತು ಕಲಿಯುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳಿಗೆ ಭಾವನಾತ್ಮಕವಾಗಿ ತೊಂದರೆ ಉಂಟಾಗುತ್ತದೆ.
ಹಾಲಿನಲ್ಲಿ ಚಹವನ್ನ ಮಿಕ್ಸ್ ಮಾಡುವುದಾಗಲಿ ಇಲ್ಲಾ ಚಹದಲ್ಲಿ ಬಿಸ್ಕೆಟ್ನ್ನ ಅದ್ದಿ ತಿನ್ನಿಸುವುದಾಗಿಲಿ ಎರಡು ಕೂಡಾ ಮಕ್ಕಳಿಗೆ ಅಪಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.