ಬೆಂಗಳೂರು : ಸಮುದ್ರ ಆಹಾರ ಪ್ರಿಯರು ಸೇವಿಸುವ ಆಹಾರದಲ್ಲಿ ಏಡಿ ಮಾಂಸ ಕೂಡ ಒಂದು . ಇದು ತುಂಬಾ ರುಚಿಕರವಾಗಿದ್ದು, ಹಲವು ಮಾಂಸಹಾರಿಗಳು ಇದನ್ನು ತಿನ್ನಲು ಬಯಸುತ್ತಾರೆ. ಹಾಗಾದ್ರೆ ಇದು ಆರೋಗ್ಯಕ್ಕೆ ಉತ್ತಮವೇ? ಎಂಬುದನ್ನು ತಿಳಿದುಕೊಳ್ಳಿ.
ಏಡಿ ಮಾಂಸದಲ್ಲಿ ಕ್ಯಾಲ್ಸಿಯಂ, ಕೊಬ್ಬು, ಪ್ರೋಟೀನ್, ವಿಟಮಿನ್ ಎ, ಸಿ, ತಾಮ್ರ, ಒಮೆಗಾ3 ಮುಂತಾದವುಗಳಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಡಿಮಾಂಸ ಸೇವನೆಯಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಇದು ನರಮಂಡಲವನ್ನು ಬಲಪಡಿಸುತ್ತದೆ. ನಿದ್ರಾ ಸಮಸ್ಯೆಯನ್ನು ನಿವಾರಿಸುತ್ತದೆ. ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆನ್ನು ನೋವು ಕಡಿಮೆಯಾಗುತ್ತದೆ.