ಅಪ್ಪಿ ತಪ್ಪಿ ಆರೆಂಜ್ ಬೀಜ ಸೇವಿಸಿದರೆ ಅಪಾಯವೇ?!

ಶುಕ್ರವಾರ, 6 ಏಪ್ರಿಲ್ 2018 (09:10 IST)
ಬೆಂಗಳೂರು: ಕಿತ್ತಳೆ ಹಣ್ಣು ಸೇವಿಸುವಾಗ ಸಾಮಾನ್ಯವಾಗಿ ಬೀಜ ಹೊರಗೆ ಎಸೆಯುತ್ತೇವೆ. ಅಪ್ಪಿ ತಪ್ಪಿ ಬೀಜ ಸೇವಿಸಿದರೆ ಅಪಾಯವಾಗಬಹುದೇ? ತಜ್ಞರು ಏನು ಹೇಳುತ್ತಾರೆ ಗೊತ್ತಾ?!

ಕಿತ್ತಳೆ ಬೀಜ ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಬದಲಾಗಿ ಇದು ದೇಹಕ್ಕೆ ಮತ್ತಷ್ಟು ಫೈಬರ್ ನಂಶ ಒದಗಿಸುತ್ತದೆ. ಒಂದು ವೇಳೆ ಇದು ಹೊಟ್ಟೆಗೆ ಹೋದರೂ ಇದು ಮಲ ರೂಪದಲ್ಲಿ ಹಾಗೇ ಹೊರಗೆ ಬರುತ್ತದೆ.

ನಿಮಗೆ ಗೊತ್ತಾ? ಆರೆಂಜ್ ಬೀಜ ನಮ್ಮ ದೇಹಕ್ಕೆ ಶಕ್ತಿ ಒದಗಿಸುತ್ತದೆ ಮತ್ತು ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ಸಾಮಾನ್ಯ ಸುಸ್ತು, ಬಳಲಿಕೆ ತಡೆಯುತ್ತದಂತೆ. ಅಷ್ಟೇ ಅಲ್ಲ ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಜೀರ್ಣ ಕ್ರಿಯೆಗೆ ಸಹಕಾರಿಯಂತೆ. ಹಾಗಾಗಿ ಆರೆಂಜ್ ಬೀಜ ಸೇವಿಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ