ಬೆಂಗಳೂರು : ಧೂಳು, ವಾತಾವರಣದ ಮಾಲಿನ್ಯದಿಂದ ಕಣ್ಣಿಗೆ ಇನ್ ಫೆಕ್ಷನ್ ಆಗಿ ಕಣ್ಣು ಕೆಂಪಾಗುತ್ತದೆ. ಇದರಿಂದ ಕಣ್ಣುಗಳು ಊದಿಕೊಳ್ಳುವ ಸಂಭವವಿರುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಕಣ್ಣು ಕೆಂಪಾಗುವುದನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.
1 ಚಮಚ ಜೇನುತುಪ್ಪ, ಮತ್ತು 1 ಚಮಚ ಹಾಲು ಮಶ್ರಣ ಮಾಡಿ ಇದರಲ್ಲಿ ಕಾಟನ್ ಪ್ಯಾಡ್ ಗಳನ್ನು ಅದ್ದಿ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ . ಸುಮಾರು 30 ನಿಮಿಷಗಳ ಬಳಿಕ ಅದನ್ನು ತೆಗೆದು ಕಣ್ಣನ್ನು ಶುದ್ಧವಾದ ನೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಒಂದು ಬಾರಿ ಮಾಡಿದರೆ ನಿಮ್ಮ ಕಣ್ಣು ಕೆಂಪಾಗುವುದು ಕಡಿಮೆಯಾಗುತ್ತದೆ.