ಬೇಸಿಗೆಯಲ್ಲಿ ತಂಪಾದ ಜ್ಯೂಸ್ ಕುಡಿದ ಕೂಲಾಗಿ

ಸೋಮವಾರ, 2 ಜೂನ್ 2014 (15:57 IST)
ಕಲ್ಲಂಗಡಿ  
 ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹೆಚ್ಚಿಗೆ ಸಿಗುತ್ತವೆ. ಇದರ ಜ್ಯೂಸ್ ಕುಡಿಯುವುದು ದೇಹಕ್ಕೆ ತಂಪಾಗಿರುತ್ತದೆ. ಇದರಲ್ಲಿ ದೇಹಕ್ಕೆ ಬೇಕಾಗುವ ಎಲ್ಲಾ ರೀತಿಯ ಮಿನರಲ್ಸ್‌‌ಗಳಿರುತ್ತವೆ. ಇದು ಸತತವಾಗಿ ಸೇವಿಸುವುದರಿಂದ ದೇಹರ ಭಾರ ಕೂಡ ಅತಿಯಾಗಿ ಹೆಚ್ಚುವುದಿಲ್ಲ. ಇದರಲ್ಲಿ ಮ್ಯಾಗ್ನಿಶಿಯಂ ,ಫಾಸ್ಪೋರಸ್ , ಐರಾನ್ ಮತ್ತು ಬಿಟಾ ಕ್ಯಾರೊಟಿನ್‌ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. 
 
ಪಪ್ಪಾಯಿ ಹಣ್ಣಿನ ಜ್ಯೂಸ್‌ 
ಪಪ್ಪಾಯಿಯ ಜ್ಯೂಸ್‌ ತಂಪಾಗಿರುತ್ತದೆ ಮತ್ತು ಅತಿ ಶೀಘ್ರದಲ್ಲಿ ಪಚನ ಕೂಡ ಆಗುತ್ತದೆ. ಕೆಲವು ಅಂಗಡಿಗಳಲ್ಲಿ ಪಪ್ಪಾಯಿಯ ಜ್ಯೂಸ್ ಲಭಿಸುತ್ತದೆ. ಯಾರಿಗೆ ಅಜೀರ್ಣದ ತೊಂದರೆ ಇದೆಯೋ ಅವರಿಗೆ ಪಪ್ಪಾಯಿ ಸೇವಿಸುವುದು ಉತ್ತಮವಾಗಿದೆ. 
 
ನಿಂಬೆ ರಸ 
ನಿಂಬೆಯಲ್ಲಿ ವಿಟಮಿನ್‌ ಸಿ ಹೆಚ್ಚಿಗಿರುತ್ತದೆ. ನಿಂಬೆ ರಸವನ್ನು ತಂಪು ನೀರಿನಲ್ಲಿ ಹಾಕಿ , ಇದರಲ್ಲಿ ಕಪ್ಪು ಉಪ್ಪು , ಜೀರಿಗೆ ಪುಡಿ ಮತ್ತು ಸ್ವಲ್ಪ ಚಾಟ್‌ ಮಸಾಲಾ ಹಾಕಿ ಕುಡಿಯಿರಿ. ಇದರಿಂದ ದೇಹಕ್ಕೆ ತಂಪು ಲಭಿಸುತ್ತದೆ. ನಿಂಬೆ ನೀರಿನಲ್ಲಿ ಕೆಲವು ಫ್ಲೆವರ್‌ಗಳು ಕೂಡ ಲಭ್ಯವಿವೆ. ಇದರಲ್ಲಿ ಮಸಾಲ ನಿಂಬೆ ನೀರು ಮ, ಖಟ್ಟಾ ನಿಂಬೆ ನೀರು. ಇದನ್ನು ಜನರು ಹೆಚ್ಚು ಇಷ್ಟ ಪಡುತ್ತಾರೆ. 
 
ಲಸ್ಸಿ 
ಲಸ್ಸಿಯಲ್ಲಿ ಕ್ಯಾಲ್ಶಿಯಂ ಹೆಚ್ಚಿಗೆ ಇರುತ್ತದೆ ಮತ್ತು ಇದರ ಜೊತೆಗೆ ಪ್ರೋಟಿನ್‌ ಕೂಡ ಇರುತ್ತದೆ. ಆದರೆ ಕೆಲವು ಜನರಿಗೆ ಡೈರಿ ಪ್ರೊಡೆಕ್ಟ್ ಇಷ್ಟವಾಗುವುದಿಲ್ಲ, ಆದರೆ ಲಸ್ಸಿ ಬೆಸಿಗೆಯಲ್ಲಿ ದೇಹಕ್ಕೆ ತುಂಬಾ ಉತ್ತಮವಾಗಿದೆ, ದೇಹಕ್ಕೆ ತಂಪು ನೀಡುವಲ್ಲಿ ಇದು ಸಹಕಾರಿಯಾಗಲಿದೆ.

ವೆಬ್ದುನಿಯಾವನ್ನು ಓದಿ