ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಶಾಂಪೂಗಳನ್ನು ಕೂದಲಿಗೆ ಹಚ್ಚಿ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕೂದಲಿನ ಬೆಳವಣೆಗೆ ಸಹಕಾರಿಯಾಗುವಂತಹ ಶಾಂಪೂವನ್ನು ಈ ರೀತಿ ತಯಾರಿಸಿ.
1 ಕಪ್ ಅಕ್ಕಿಯನ್ನು ತೊಳೆದು ಬಳಿಕ ಶುದ್ಧ ನೀರಿನಲ್ಲಿ 1 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಈ ನೀರನ್ನು ಸೋಸಿ ಅದಕ್ಕೆ 5 ಸೋಪ್ ನಟ್ ಬೀಜಗಳನ್ನು ಸೇರಿಸಿ 4 ಗಂಟೆಗಳ ಕಾಲ ನೆನೆಸಿ. ಬಳಿಕ ಈ ನೀರನ್ನು ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.