ಟಾಯ್ಲೆಟ್ ಗಿಂತಲೂ ಮೊಬೈಲ್ ಫೋನ್ ಕೊಳಕು!

ಮಂಗಳವಾರ, 4 ಡಿಸೆಂಬರ್ 2018 (09:12 IST)
ಬೆಂಗಳೂರು: ಟಾಯ್ಲೆಟ್ ಎಂದರೆ ಗಲೀಜು ಎಂದು ನೀವಂದುಕೊಂಡಿದ್ದರೆ, ಅದಕ್ಕಿಂತ ಕೊಳಕಾದ ವಸ್ತು ನಿಮ್ಮ ಮೊಬೈಲ್ ಫೋನ್ ಎಂಬುದನ್ನು ನಂಬಲೇ ಬೇಕು!


ನೀವು ಸದಾ ಬಳಸುವ ಮೊಬೈಲ್ ಫೋನ್ ನಲ್ಲಿ ಟಾಯ್ಲೆಟ್ ಗಿಂತಲೂ ಹೆಚ್ಚು ಬ್ಯಾಕ್ಟೀರಿಯಾ, ಗಲೀಜು ಇರುತ್ತದಂತೆ! ಹಾಗಂತ ಹೊಸ ಅಧ್ಯಯನವೊಂದು ಹೇಳಿದೆ.

ಟಾಯ್ಲೆಟ್ ಗಿಂತಲೂ ಆರು ಪಟ್ಟು ಹೆಚ್ಚು ಕೊಳೆ, ರೋಗ ಹರಡುವ ಬ್ಯಾಕ್ಟೀರಿಯಾಗಳು ಮೊಬೈಲ್ ನಲ್ಲಿರುತ್ತವೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಹೀಗಾಗಿ ಮೊಬೈಲ್ ಬಳಸಿದ ಬಳಿಕ ಆಹಾರ ಸೇವನೆ ಮಾಡುವ ಮೊದಲು ಕೈಗಳನ್ನು ಸರಿಯಾಗಿ ಶುಚಿಗೊಳಿಸುವುದು ಅಗತ್ಯ ಎಂಬುದು ಅಧ್ಯಯನಕಾರರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ