ಗಂಡ ಹೆಂಡಿರ ನಡುವೆ ವಯಸ್ಸಿನ ಅಂತರವಿದ್ದರೆ ಅಪಾಯ!

ಶನಿವಾರ, 5 ಆಗಸ್ಟ್ 2017 (11:49 IST)
ನವದೆಹಲಿ: ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು? ಪ್ರೀತಿ ಮತ್ತು ಸಂಬಂಧದಲ್ಲಿ ವಯಸ್ಸಿನ ಅಂತರದ ಪ್ರಶ್ನೆಯೇ ಬರವುದಿಲ್ಲ ಎಂದು ನೀವಂದುಕೊಂಡಿದ್ದರೆ ತಪ್ಪು.

 
ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಕಡಿಮೆಯಿದ್ದಷ್ಟೂ ಸಂಬಂಧ ಚೆನ್ನಾಗಿರುತ್ತದೆ. ಹೆಚ್ಚು ವಯಸ್ಸಿನ ಅಂತರವಿದ್ದರೆ, ಆರಂಭದ ದಿನಗಳು ಮುಗಿದು ಜೀವನದಲ್ಲಿ ಸೆಟ್ಲ್ ಆಗುವ ದಿನ ಬಂದಾಗ ಭಿನ್ನಾಭಿಪ್ರಾಯಗಳು ಶುರುವಾಗುತ್ತದೆ ಎಂದು ಕೊಲೆರಾಡೊ ವಿವಿ ನಡೆಸಿದ ಅಧ್ಯಯನವೊಂದು ಬಹಿರಂಗಪಡಿಸಿದೆ.

ಹೆಚ್ಚು ವಯಸ್ಸಿನ ಅಂತರವಿಲ್ಲದ ಅಥವಾ ಒಂದೇ ವಯಸ್ಸಿನ ಸಂಗಾತಿಯನ್ನು ಮದುವೆಯಾದವರು ತಮ್ಮ ವೈವಾಹಿಕ ಜೀವನದಲ್ಲಿ ಹೆಚ್ಚು ತೃಪ್ತಿ ಹೊಂದಿರುತ್ತಾರೆಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಅದರಲ್ಲೂ ವಿಶೇಷವಾಗಿ ಹೆಚ್ಚು ವಯಸ್ಸು ಅಂತರವಿದ್ದರೆ, ಹಣಕಾಸಿನ ವಿಚಾರಕ್ಕೆ ಭಿನ್ನಾಭಿಪ್ರಾಯ ಬರುವುದು ಸಹಜ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇದನ್ನೂ ಓದಿ.. ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಚೀನಾ ಹೊಸ ತಂತ್ರ ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ