ಮೊಟ್ಟೆ ತಿಂದ ನಂತರ ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬೇಡಿ

ಮಂಗಳವಾರ, 26 ನವೆಂಬರ್ 2019 (09:11 IST)
ಬೆಂಗಳೂರು : ಮೊಟ್ಟೆ ಎಲ್ಲರಿಗೂ ತುಂಬಾ ಇಷ್ಟವಾದ ಆಹಾರ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ದಿನಕ್ಕೊಂದು ಮೊಟ್ಟೆ ಸೇವಿಸಿದರೆ ದೇಹವು ಆರೋಗ್ಯವಾಗಿರುತ್ತದೆ. ಆದರೆ ಈ ಮೊಟ್ಟೆಯ ಜೊತೆಗೆ ಕೆಲವು ಆಹಾರವನ್ನು ತಿಂದರೆ ಆರೋಗ್ಯಕ್ಕೆ ಹಾನಿಕಾರಕ.


ಬೇಯಿಸಿದ ಮೊಟ್ಟೆಯನ್ನು ತಿಂದ ನಂತರ ನಿಂಬೆಹಣ್ಣಿನ ರಸವನ್ನು ಸೇವಿಸಬಾರದು. ಇದರಿಂದ ಅಲರ್ಜಿಯಾಗುವ ಸಂಭವವಿದೆ. ಹಾಗೇ ಬಾಳೆಹಣ್ಣನ್ನು ಕೂಡ ಮೊಟ್ಟೆಯ ಜೊತೆ ಸೇವಿಸಬಾರದು. ಇದರಿಂದ ಹೊಟ್ಟೆ ನೋವು ಬರುತ್ತದೆ.

 

ಮೊಟ್ಟೆಯನ್ನು ಪೂರ್ತಿಯಾಗಿ ಬೇಯಿಸಿ ತಿನ್ನಿ. ಅರ್ಧ ಬೇಯಿಸಿದ ಮೊಟ್ಟೆ ಸೇವಿಸಿದರೆ ವಾಂತಿ, ಭೇದಿಯಾಗುವ ಸಂಭವವಿದೆ. ಹಾಗೇ ಮೊಟ್ಟೆ ತಿಂದು 1-2 ಗಂಟೆಯ ನಂತರ ಬೇರೆ ಆಹಾರವನ್ನು ಸೇವಿಸಿ. ಇದರಿಂದ ಆರೋಗ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ