ಕೊರೋನಾದಿಂದಾಗಿ ಆಗಾಗ ಕೈ ತೊಳೆಯುವ ಗೀಳು ಅಂಟಿದೆಯೇ?

ಶನಿವಾರ, 20 ಜೂನ್ 2020 (07:26 IST)
ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಅದು ಈ ಕೊರೋನಾ ವಿಚಾರದಲ್ಲಿ ನಿಜವಾಗಿದೆ. ಕೊರೋನಾ ಬಾರದಂತೆ ಆಗಾಗ ಕೈತೊಳೆಯುತ್ತಿರಿ, ಶುಚಿಯಾಗಿರಿ ಎಂದು ಸಲಹೆ ನೀಡಿದ್ದೇ ತಪ್ಪಾಯ್ತು. ಇದೀಗ ಕೆಲವರಿಗೆ ಮಾನಸಿಕ ಖಾಯಿಲೆಯಾಗಿಬಿಟ್ಟಿದೆ.

 

ಆಗಾಗ ಕೈ ತೊಳೆಯುವುದು, ಹೋದಲ್ಲಿ ಬಂದಲ್ಲಿ ತೊಳೆದುಕೊಳ್ಳುವುದು, ಎಲ್ಲಿ ಮುಟ್ಟಿದರೆ ಏನಾಗುವುದೋ ಎಂಬ ಆತಂಕವಾಗುವುದು ಇತ್ಯಾದಿ. ಸೈಕಾಲಜಿಕಲ್ ಭಾಷೆಯಲ್ಲಿ ಇದನ್ನು ಒಂದು ಆತಂಕದ ಮನೋರೋಗ ಅಥವಾ ಗೀಳು ಮನೋರೋಗ ಎನ್ನಬಹುದು.

ಇದು ಅತಿಯಾದರೆ ಮನೋವೈದ್ಯರ ಸಲಹೆ ಪಡೆದು ವೈದ್ಯಕೀಯವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ಸಣ್ಣ ಹಂತದಲ್ಲಿದ್ದರೆ ನಾವೇ ಅಂತಹವರಿಗೆ ತಿಳಿ ಹೇಳಬೇಕಾಗುತ್ತದೆ. ಸ್ವಲ್ಪ ಕೊಳಕಾಗಿರುವುದರ ಮಹತ್ವವನ್ನೂ ಹೇಳಬೇಕಾಗುತ್ತದೆ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ