ಬೆಂಗಳೂರು : ಒಮೆಗಾ 3 ಕೊಬ್ಬಿನಾಮ್ಲಗಳು ಆರೋಗ್ಯಕ್ಕೆ ಉತ್ತಮ. ಇದು ಹೃದಯದ ಕಾಯಿಲೆಗಳಿಂದ ದೂರವಿಡುತ್ತದೆ. ಆದಕಾರಣ ಇವುಗಳನ್ನು ಹೆಚ್ಚಾಗಿ ಸೇವಿಸಿ. ಒಮೆಗಾ 3 ತುಂಬಿರುವ ಕೆಲವು ಬೀಜಗಳು ಇಲ್ಲಿವೆ ನೋಡಿ.
*ವಾಲ್ ನಟ್ಸ್ : ಇದರಲ್ಲಿ ಒಮೆಗಾ 3 ಅತ್ಯಧಿಕವಾಗಿದ್ದು, ಇದು ಉರಿಯೂತ, ಕಡಿಮೆ ರಕ್ತದೊತ್ತಡ, ಟೈಪ್ 2 ಮಧುಮೇಹವನ್ನು ನಿಯಂತ್ರಿಸುತ್ತದೆ. ಮತ್ತು ಮೆದುಳಿನ ಆರೋಗ್ಯ ಕಾಪಾಡುತ್ತದೆ.
*ಅಗಸೆ ಬೀಜ : ಇದರಲ್ಲಿ ಪ್ರೋಟಿನ್, ಕಬ್ಬಿಣ, ಸತು, ಮೆಗ್ನೀಶಿಯಂ ಕ್ಯಾಲ್ಸಿಯಂ , ಫೋಲೇಟ್ , ಬೀಟಾ ಕ್ಯಾರೋಟಿನ್, ಒಮೆಗಾ 3,6 ಅಧಿಕವಾಗಿದೆ.
*ಕಡಲೆಕಾಯಿ : ಇದರಲ್ಲಿ ಕೂಡ ಪ್ರೋಟಿನ್, ಫೈಬರ್, ಒಮೆಗಾ3 , ಹಲವಾರಿ ಜೀವಸತ್ವ ಮತ್ತು ಖನಿಜಾಂಶ ಅಧಿಕವಾಗಿದೆ.