ಕಣ್ಣಿನ ಸಮಸ್ಯೆ ಇರುವವರು ಈ ಮನೆಮದ್ದು ಬಳಸಿ ಕನ್ನಡಕಕ್ಕೆ ಗುಡ್ ಬೈ ಹೇಳಿ

ಶುಕ್ರವಾರ, 21 ಡಿಸೆಂಬರ್ 2018 (10:06 IST)
ಬೆಂಗಳೂರು : ವಯಸ್ಸಾದವರಿಗೆ ಕಣ್ಣಿನ ಸಮಸ್ಯೆ ಇರುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಗೂ ಕೂಡ ಕಣ್ಣಿನ ಸಮಸ್ಯೆ ಕಾಡುತ್ತದೆ. ಇದರಿಂದ ಮಕ್ಕಳಿಗೆ ಕನ್ನಡಕ ಧರಿಸಬೇಕಾಗುತ್ತದೆ. ಈ ಕಣ್ಣಿನ ಸಮಸ್ಯೆಯನ್ನು ದೂರಮಾಡಲು ಈ ಮನೆಮದ್ದನ್ನು ಬಳಸಿ.

ಬಾದಾಮಿ ಪುಡಿ 150 ಗ್ರಾಂ(ಬಾದಾಮಿಯನ್ನು ತಂದು ಅದನ್ನು ನೆನೆಸಿ ನಂತರ ಸಿಪ್ಪೆ ತೆಗೆದು ಸಣ್ಣದಾಗಿ ಕಟ್ ಮಾಡಿಕೊಂಡು ಬಿಸಿಲಿನಲ್ಲಿ 3 ದಿನ ಒಣಗಿಸಿ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.), ಗಸಗಸೆ ಫ್ರೈ ಮಾಡಿ ಪುಡಿಮಾಡಿಕೊಂಡು ಅದರಲ್ಲಿ 100 ಗ್ರಾಂ ತೆಗೆದುಕೊಳ್ಳಿ. ಬಿಳಿ ಮೆಣಸಿನ ಪುಡಿ 50ಗ್ರಾಂ, ಕಲ್ಲುಸಕ್ಕರೆ ಪುಡಿ 100 ಗ್ರಾಂ, ಇವಿಷ್ಟನ್ನು ತೆಗೆದುಕೊಂಡು ಅದಕ್ಕೆ ಶುದ್ಧ ಹಸುವಿನ ತುಪ್ಪ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಒಂದು ಗಾಜಿನ ಸೀಸದಲ್ಲಿ ಸ್ಟೋರ್ ಮಾಡಿ ಇಡಿ. ಇದು 1 ತಿಂಗಳಾದರೂ ಕೆಡುವುದಿಲ್ಲ.

 

ಇದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 5ಗ್ರಾಂ( ½ ಚಮಚ)ನಷ್ಟು ತಿನ್ನಬೇಕು. ನಂತರ ಹಾಲು ಕುಡಿಯಲೇ ಬೇಕು. ಇದನ್ನು 3 ತಿಂಗಳಗಳ ಕಾಲ ಮಾಡಿದರೆ ಕಣ್ಣಿನ ಸಮಸ್ಯೆ ದೂರವಾಗಿ ಕನ್ನಡಕ ಧರಿಸುವ ಅವಶ್ಯಕತೆಯೇ ಇರುವುದಿಲ್ಲ.  

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ