ನಿಫಾ ವೈರಸ್ ಹರಡದಂತೆ ತಡೆಯಲು ಈ ರೀತಿ ಎಚ್ಚರಿಕೆಯಿಂದಿರಿ

ಶುಕ್ರವಾರ, 25 ಮೇ 2018 (08:50 IST)
ಬೆಂಗಳೂರು: ನಿಫಾ ವೈರಸ್ ಕೇರಳದಲ್ಲಿ ಈಗಾಗಲೇ ಒಂದೇ ಕುಟುಂಬದ ನಾಲ್ವರನ್ನು ಬಲಿತೆಗೆದುಕೊಂಡಿದೆ. ಈ ಮಾರಕ ರೋಗ ಹರಡದಂತೆ ತಡೆಯಲು ರಾಜ್ಯದಲ್ಲೂ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬಾವಲಿ ತಿನ್ನುವ ಹಣ್ಣುಗಳು, ಆಹಾರ ವಸ್ತುಗಳನ್ನು ನಾವು ಸೇವಿಸುವುದರಿಂದ ಈ ಖಾಯಿಲೆ ಹರಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ಹೀಗಾಗಿ ಬಾವಲಿ, ಪಕ್ಷಿಗಳು ಅರ್ಧ ಕಚ್ಚಿದ, ಕೆರೆದ ಹಣ್ಣುಗಳನ್ನು ಸೇವಿಸಬೇಡಿ. ಆದಷ್ಟು ಸಂಸ್ಕರಿತ ಹಣ್ಣುಗಳನ್ನೇ ಸೇವಿಸುವುದು ಉತ್ತಮ. ಮಾವಿನ ಹಣ್ಣು, ಸೀಬೇಕಾಯಿ, ಹಲಸಿನ ಹಣ್ಣು ಸೇವಿಸುವಾಗ  ವಿಶೇಷವಾಗಿ ಎಚ್ಚರಿಕೆಯಿರಲಿ. ಬಾವಲಿ ಇರುವ ಸ್ಥಳದಲ್ಲಿ ಆಹಾರ, ನೀರು ಸೇವಿಸದಿರುವುದೇ ಉತ್ತಮ.

ಸೋಂಕು ಪೀಡಿತ ಪ್ರದೇಶಕ್ಕೆ ಸದ್ಯಕ್ಕೆ ತೆರಳದಿರುವುದೇ ಉತ್ತಮ. ಅನಿವಾರ್ಯವಾಗಿ ತೆರಳುವುದಿದ್ದರೆ ಗುಣಮಟ್ಟದ ಮಾಸ್ಕ್ ಧರಿಸಿ. ಅಂತಹ ಸ್ಥಳಕ್ಕೆ ಹೋದರೆ ಮರಳಿದ ಮೇಲೆ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ.  ಹಾಗೆಯೇ ಸರಿಯಾದ ಸೋಪ್ ಬಳಸಿ ಸ್ನಾನ ಮಾಡಿ.

ಹಣ್ಣು ಮತ್ತು ತರಕಾರಿಗಳನ್ನು ಸರಿಯಾಗಿ ಉಪ್ಪು ನೀರಿನಲ್ಲಿ ಕೆಲ ಹೊತ್ತು ನೆನೆಸಿ ತೊಳೆದು ನಂತರವೇ ಸೇವಿಸಿ. ಗಾಯವಾದ, ಕೆರೆತದ ಕಲೆಯಿರುವ ಹಣ್ಣು,ಗಳನ್ನು ಸೇವಿಸದಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ