ಗರ್ಭಿಣಿಯರು ಸೆಕ್ಸ್ ಮಾಡುವುದು ಎಷ್ಟು ಸರಿ?
ಗರ್ಭಿಣಿ ಮಹಿಳೆಯರ ದೇಹಸ್ಥಿತಿ, ಮನಸ್ಥಿತಿಗೆ ಹೊಂದಿಕೊಂಡು ಸೆಕ್ಸ್ ಮಾಡಬಹುದೇ ಬೇಡವೇ ಎಂಬುದನ್ನು ಪರಸ್ಪರ ತೀರ್ಮಾನಿಸಕೊಳ್ಳಬೇಕು. ಲೈಂಗಿಕ ಕ್ರಿಯೆ ನಡೆಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯಬಹುದು.
ಒಂದು ವೇಳೆ ಹೈ ರಿಸ್ಕ್ ಪ್ರೆಗ್ನೆನ್ಸಿಯಾಗಿದ್ದರೆ ಲೈಂಗಿಕ ಸಂಪರ್ಕ ಮಾಡದೇ ಇರುವುದೇ ಒಳ್ಳೆಯದು. ಒಂದು ವೇಳೆ ಗರ್ಭಿಣಿ ಮಹಿಳೆಯೊಂದಿಗೆ ಲೈಂಗಿಕ ಸಮಾಗಮ ನಡೆಸುವುದಿದ್ದರೆ ಆದಷ್ಟು ಆಕೆಗೆ ಒತ್ತಡ ಬೀಳದಂತೆ, ಎಚ್ಚರಿಕೆಯಿಂದ ಮಾಡಬೇಕು. ಇಲ್ಲವಾದರೆ ಪರಸ್ಪರ ಲೈಂಗಿಕ ಸಂತೋಷ ಕೊಡುವ ಇತರ ಚಟುವಟಿಕೆಗಳನ್ನು ಮಾಡಬಹುದು.