ಕುಂಬಳಕಾಯಿ ಪಾಯಸ

ಭಾನುವಾರ, 23 ಆಗಸ್ಟ್ 2020 (10:21 IST)
ಬೆಂಗಳೂರು : ಕುಂಬಳಕಾಯಿಯನ್ನು ಹೆಚ್ಚಾಗಿ ಸಾಂಬಾರು ಪದಾರ್ಥಗಳಲ್ಲಿ, ಸಿಹಿತಿಂಡಿಗಳನ್ನು ಮಾಡಲು ಬಳಸುತ್ತಾರೆ.ಈ ಕುಂಬಳಕಾಯಿಯಿಂದ ಪಾಯಸ ಕೂಡ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು : 2 ಕಪ್ ಸಿಹಿ ಕುಂಬಳಕಾಯಿ, 1 ಕಪ್ ತೆಂಗಿನಕಾಯಿ, 1 ಚಮಚ ತುಪ್ಪ, 8 ಬಾದಾಮಿ, 8 ಗೋಡಂಬಿ, 1 ಚಮಚ ಒಣ ದ್ರಾಕ್ಷಿ, 2 ಏಲಕ್ಕಿ, ¼ ಕಪ್ ಬೆಲ್ಲ, 1 ಕಪ್ ಹಾಲು.

ಮಾಡುವ ವಿಧಾನ :  ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಬಾದಾಮಿ, ಗೋಡಂಬಿಗಳನ್ನು ಪ್ರೈ ಮಾಡಿ. ಒಂದ್ರಾಕ್ಷಿಯನ್ನು ಹುರಿದು ತೆಗೆದಿಡಿ. ಬಳಿಕ ಅದೇ ಬಾಣಲೆಯಲ್ಲಿ ಕುಂಬಳಕಾಯಿ ಪೀಸ್ ನ್ನು ಫ್ರೈ ಮಾಡಿ ಬೇಯಿಸಿ. ಬಳಿಕ ಇದಕ್ಕೆ ತೆಂಗಿನ ಕಾಯಿ, ಏಲಕ್ಕಿ ರುಬ್ಬಿಕೊಂಡು ಹಾಕಿ. ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ 5 ನಿಮಿಷ ಕುದಿಸಿರಿ. ಬಳಿಕ ಹುರಿದ ಬೀಜಗಳನ್ನು ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಅದು ತಣ್ಣಗಾದ ಮೇಲೆ ಕುದಿಸಿದ ಹಾಲನ್ನು ಹಾಕಿದರೆ ಕುಂಬಳಕಾಯಿ ಪಾಯಸ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ