ಮೆಂತ್ಯ ಸೊಪ್ಪು ತಿಂತೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ!

ಗುರುವಾರ, 31 ಆಗಸ್ಟ್ 2017 (08:26 IST)
ಬೆಂಗಳೂರು: ಮೆಂತ್ಯ ಸೊಪ್ಪಿನ ಪಲ್ಯ, ಸಾರು, ಪುಲಾವ್… ವಾವ್… ಕೇಳುವಾಗಲೇ ಬಾಯಲ್ಲಿ ನೀರೂರುತ್ತಿದೆಯೇ? ಹಾಗಿದ್ದರೆ ಮೆಂತ್ಯ ಸೊಪ್ಪು ಸೇವಿಸುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳೇನು ಎಂದು ನೀವು ತಿಳಿದುಕೊಳ್ಳಲೇಬೇಕು.

 
ಹೊಟ್ಟೆ ಕೆಡಿಸುತ್ತೆ
ಮೆಂತ್ಯ ಸೊಪ್ಪು ಇಷ್ಟ ಅಂತ ಸಿಕ್ಕಾಪಟ್ಟೆ ತಿಂದರೆ ಬೇಧಿ ಗ್ಯಾರಂಟಿ. ಅದರಲ್ಲೂ ಹೆಚ್ಚಾಗಿ ಹಾಲುಣಿಸುವ ತಾಯಂದಿರು ಮೆಂತ್ಯ ಸೊಪ್ಪು ಹೆಚ್ಚು  ತಿಂದರೆ ಅಜೀರ್ಣವಾಗುವ ಸಂಭವವಿದೆ.

ಅಲರ್ಜಿ
ಮೆಂತ್ಯ ಸೊಪ್ಪಿನಲ್ಲಿರುವ ಕೆಲವೊಂದು ಅಂಶ ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು. ಚರ್ಮ ಕೆಂಪಗಾಗುವುದು ಮತ್ತು ತುರಿಕೆಯಂತಹ ಅಲರ್ಜಿ ಸಮಸ್ಯೆ ಬರಬಹುದು.

ಮಕ್ಕಳಿಗೆ ಒಳ್ಳೆಯದಲ್ಲ
ಮಕ್ಕಳಲ್ಲಿ ಮೆಂತ್ಯ ಸೊಪ್ಪು ಬೇಧಿಗೆ ಕಾರಣವಾಗಬಹುದು. ಹಾಗಾಗಿ ತೀರಾ ಚಿಕ್ಕ ಮಕ್ಕಳಿಗೆ ಮೆಂತ್ಯ ಸೊಪ್ಪು ನೀಡುವುದಿಲ್ಲ ಎಂದು ಕೆಲವು ವೈದ್ಯರು ಸಲಹೆ ಮಾಡುತ್ತಾರೆ.

ದೇಹ ಮತ್ತು ಮೂತ್ರದ ವಾಸನೆ
ಹೆಚ್ಚು ಮೆಂತ್ಯ ಸೊಪ್ಪು ಸೇವಿಸುವುದರಿಂದ ದೇಹದ ಬೆವರಿನ ವಾಸನೆ ಮತ್ತು ಮೂತ್ರದ ವಾಸನೆ ತೀರಾ ಅಸಹನೀಯವಾಗಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ