ಮುಟ್ಟು ಬಾರದೇ ಇರುವುದಕ್ಕೆ ಕಾರಣಗಳೇನು ಗೊತ್ತಾ?

ಸೋಮವಾರ, 11 ಮಾರ್ಚ್ 2019 (17:34 IST)
ಬೆಂಗಳೂರು: ಸರಿಯಾದ ದಿನಕ್ಕೆ ಋತುಸ್ರಾವವಾಗದೇ ಇದ್ದಾಗ ಮಹಿಳೆಯರಲ್ಲಿ ಹಲವು ಆತಂಕಗಳು ಬರುವುದು ಸಹಜ. ಮುಖ್ಯವಾಗಿ ಗರ್ಭಿಣಿಯೇ ಎಂಬ ಸಂಶಯ ಕಾಡುತ್ತದೆ. ಆದರೆ ಮುಟ್ಟು ಸರಿಯಾದ ದಿನಕ್ಕೆ ಬಾರದೇ ಇರುವುದಕ್ಕೆ ಹಲವು ಕಾರಣಗಳಿವೆ.


ಒತ್ತಡ
ಮುಖ್ಯವಾಗಿ ಒತ್ತಡ ಮುಟ್ಟಿನ ದಿನಾಂಕವನ್ನು ಅದಲು ಬದಲು ಮಾಡಬಹುದು. ಮಾನಸಿಕ ಒತ್ತಡ ಮಹಿಳೆಯ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ.

ದೇಹ ತೂಕ
ತೆಳ್ಳಗೆ, ದೇಹ ತೂಕ ವಯಸ್ಸಿಗೆ ತಕ್ಕಷ್ಟು ಇಲ್ಲದೇ ಇದ್ದಾಗ ಈ ರೀತಿ ಅನಿಯಮಿತ ಮುಟ್ಟು ಸಾಮಾನ್ಯ.

ವಿಪರೀದ ಕಸರತ್ತು
ದೈಹಿಕ ವ್ಯಾಯಾಮ ದೇಹಕ್ಕೆ ಒಳ್ಳೆಯದೇ. ಆದರೆ ಇದು ಮಿತಿ ಮೀರಿದಾಗ ಋತುಚಕ್ರದ ಮೇಲೆ ಪರಿಣಾಮ ಬೀರಬಹುದು.

ಖಾಯಿಲೆಗಳು
ಗರ್ಭಾಶಯಕ್ಕೆ ಸಂಬಂಧಿಸಿದ ಯಾವುದೋ ಸಮಸ್ಯೆಗಳು ಮಹಿಳೆಯರಲ್ಲಿ ಮುಟ್ಟು ಅನಿಯಮಿತವಾಗುವಂತೆ ಮಾಡಬಹುದು. ಹೀಗಾಗಿ ಅಂತಹ ಸಂದರ್ಭದಲ್ಲಿ ತಕ್ಷಣ ತಜ್ಞ ವೈದ್ಯರನ್ನು ಕಾಣುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ