ಬೆಂಗಳೂರು: ಸುದೀರ್ಘ ಕಾಲದಿಂದ ಫಲವಂತಿಕೆ ಇಲ್ಲದೇ ಹೋದರೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುತ್ತಾ ಸಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ದಂಪತಿ ಮಕ್ಕಳ ಮಾಡಿಕೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪ್ರಯತ್ನಿಸಿ ವಿಫಲವಾದರೆ ಸಮಸ್ಯೆ ಇದೆ ಎಂದೇ ಅರ್ಥ. ಈ ರೀತಿ ಸುದೀರ್ಘ ಅವಧಿಗೆ ಮಕ್ಕಳಾಗದೇ ಇದ್ದಾಗ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗುತ್ತದೆ ಎಂಬ ಶಾಕಿಂಗ್ ಸತ್ಯವನ್ನು ವೀಟಾ-ಸಲ್ಯೂಟ್ ಸ್ಯಾನ್ ರಫೇಲ್ ವಿವಿಯ ಅಧ್ಯಯನಕಾರರು ಕಂಡುಕೊಂಡಿದ್ದಾರೆ.
ಬಂಜೆತನ ಎನ್ನುವದನ್ನು ಪುರುಷರೂ ಗಂಭೀರವಾಗಿ ಪರಿಗಣಿಸಬೇಕಿದೆ. ಸುದೀರ್ಘ ಕಾಲದ ಬಂಜೆತನ ಪುರುಷರಲ್ಲೂ ವೀರ್ಯಾಣು ಸಂಖ್ಯೆ ಕುಂಠಿತವಾಗಲು ಕಾರಣವಾಗುತ್ತದೆ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.