ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಗ್ಯಾಸ್ ಸಮಸ್ಯೆ ಸಾಮಾನ್ಯ ಸಮಸ್ಯೆಯಾದರೂ ಇದರಿಂದ ಹೊಟ್ಟೆ ನೋವು, ತಲೆ ನೋವು, ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ. ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಸಮಸ್ಯೆಗೆ ಶಾಶ್ವತವಾಗಿ ಗುಡ್ ಬಾಯ್ ಹೇಳಬಹುದು.
ಹೆಚ್ಚಿನವರು ಹೊಟೇಲ್ ಗಳಲ್ಲಿ ಊಟ ಮಾಡುತ್ತಾರೆ. ಕೆಟ್ಟ ತೈಲ ಹಾಗೂ ಮಸಾಲೆ ಬಳಸಿ ಆಹಾರ ತಯಾರಿಸುವುದರಿಂದ ಗ್ಯಾಸ್ ಸಮಸ್ಯೆ ಕಾಡೋದು ಸಾಮಾನ್ಯವಾಗುತ್ತದೆ. ಹಾಗಾಗಿ ಮಸಾಲೆ ರಹಿತ ಹೊಟೇಲ್ ಆಹಾರ ಸೇವನೆ ಮಾಡುವುದು ಒಳ್ಳೆಯದು.
ಕೆಲವು ಸೋಮಾರಿ ಜನರು ಆಹಾರವನ್ನು ಜಗಿಯದೆ ಹಾಗೇ ನುಂಗಿ ಬಿಡ್ತಾರೆ. ಇದು ಜೀರ್ಣಕ್ರಿಯೆಯನ್ನು ನಿಧಾನ ಮಾಡುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆದ್ದರಿಂದ ಪ್ರತಿ ಬಾರಿ ಆಹಾರ ಸೇವನೆ ಮಾಡುವಾಗಲು ನಿಧಾನವಾಗಿ ಜಗಿದು ನುಂಗಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.