ಈ ಕಾಯಿಲೆ ಇರುವವರು ಟೊಮೆಟೊ ತಿನ್ನದಿರುವುದೇ ಉತ್ತಮ

ಭಾನುವಾರ, 21 ಏಪ್ರಿಲ್ 2019 (13:14 IST)
ಬೆಂಗಳೂರು : ಸಾಮಾನ್ಯವಾಗಿ ತರಕಕಾರಿಗಳು ಆರೋಗ್ಯಕ್ಕೆ ಉತ್ತಮವೆಂದು ಹೇಳುತ್ತಾರೆ. ಆದರೆ ಟೊಮೆಟೊ ದಿನನಿತ್ಯ ಆಹಾರದ ಅವಿಭಾಜ್ಯ ಭಾಗವಾಗಿದ್ದರೂ, ಬೇರೆ ತರಕಾರಿ ಅಥವಾ ಹಣ್ಣುಗಳಿಗೆ ಹೋಲಿಸಿದರೆ ಇದು ನಮ್ಮ ಆರೋಗ್ಯದ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರುತ್ತದೆ.

ಇದು ಹೆಚ್ಚು ಆಮ್ಲೀಯವಾಗಿದ್ದು, ಅವು ಎದೆಯುರಿಗೆ ಕಾರಣವಾಗುತ್ತದೆ. ಟೊಮೇಟೊಗಳು ಮಾಲಿಕ್ ಮತ್ತು ಸಿಟ್ರಿಕ್ ಆಸಿಡ್ಗಳಿಂದ ತುಂಬಿರುತ್ತವೆ ಮತ್ತು ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್ಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ.. ನಮ್ಮ ಉತ್ತಮ ಆರೋಗ್ಯಕ್ಕೆ ಟೊಮೇಟೊಗಳಂತಹ ಆಮ್ಲೀಯ ಆಹಾರವನ್ನು ತಪ್ಪಿಸುವುದು ಒಳ್ಳೆಯದು .


 

ಟೊಮೇಟೊದಲ್ಲಿ  ಅಲರ್ಜಿಯ ಲಕ್ಷಣಗಳು ಹೆಚ್ಚಾಗಿ ಸಂಭವಿಸುತ್ತವೆ. ಇವುಗಳಲ್ಲಿ, ಚರ್ಮದ ದದ್ದುಗಳು, ಕೆಮ್ಮುವಿಕೆ, ಸೀನುವಿಕೆ, ಗಂಟಲಿನ ಕಿರಿಕಿರಿ, ಮತ್ತು ಮುಖ, ಬಾಯಿ, ಮತ್ತು ನಾಲಿಗೆಗಳ ಊತ,ಉಂಟಾಗಬಹುದು.

 

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಬಳಲುತ್ತಿರುವವರು ಇದರ ಸೇವನೆಯನ್ನು ಕಡಿಮೆ ಮಾಡುವುದೇ ಉತ್ತಮ. ಏಕೆಂದರೆ ಅವುಗಳು ಬಹಳಷ್ಟು ನೀರು ಹೊಂದಿರುತ್ತವೆ. ಟೊಮೇಟೊಸಾಸ್ ಅಥವಾ ಟೊಮೇಟೊನಿಂದ ಮಾಡಿದ ಇನ್ನಾವುದೇ ಆಗಲಿ, ತಪ್ಪಿಸುವುದರ ಮೂಲಕ ಮೂತ್ರಪಿಂಡ ಕಾಯಿಲೆಯ ಕಾರಣಗಳಲ್ಲಿ ಒಂದಾದ ರಕ್ತದಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಮಟ್ಟಗಳು ನಿಭಾಯಿಸಬಹುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ        

 

 

.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ