ಸ್ಟ್ರಾಬೆರಿ ಹಣ್ಣು ತಿಂದರೆ ಜೀವಕ್ಕೆ ಅಪಾಯವಂತೆ. ಈ ಬಗ್ಗೆ ಸಂಶೋಧನೆ ಏನು ಹೇಳಿದೆ ಗೊತ್ತಾ?
ಶನಿವಾರ, 26 ಮೇ 2018 (06:29 IST)
ಬೆಂಗಳೂರು : ಸ್ಟ್ರಾಬೆರಿ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಅಷ್ಟು ರುಚಿಯಾಗಿರುತ್ತದೆ ಈ ಹಣ್ಣು. ಹೆಚ್ಚಾಗಿ ಮಕ್ಕಳು ಸ್ಟ್ರಾಬೆರಿ ಫ್ಲೇವರ್ ಇಷ್ಟ ಪಡುತ್ತಾರೆ.. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದನ್ನ ತಿಂದರೆ ಪ್ರಾಣಕ್ಕೆ ಮಾರಕ. ಯಾಕಂದ್ರೆ ಈ ಹಣ್ಣಿನಲ್ಲಿ ಕ್ರಿಮಿನಾಶಕಗಳು ಹಾಗೇ ಉಳಿದುಕೊಂಡುಬಿಡುತ್ತವೆ ಅನ್ನೋದು ಸಂಶೋಧನೆಯಲ್ಲಿ ಸಾಬೀತಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯ ಪ್ರಕಾರ ಕ್ರಿಮಿನಾಶಕಗಳು ಮಾನವರಿಗೆ ಅತ್ಯಂತ ವಿಷಕಾರಿ. ಅವು ನಮ್ಮ ಸಂತಾನೋತ್ಪತ್ತಿ, ಇಮ್ಯೂನ್ ಸಿಸ್ಟಂ ಹಾಗೂ ನರ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತವೆ, ಕ್ಯಾನ್ಸರ್ ಗೂ ಕಾರಣವಾಗುತ್ತವೆ.
48 ಬಗೆಯ ಹಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವುಗಳ ಪೈಕಿ ಸ್ಟ್ರಾಬೆರಿಯಲ್ಲಿ ಕ್ರಿಮಿನಾಶಕದ ಪ್ರಮಾಣ ಅತ್ಯಧಿಕವಾಗಿದೆ. ಸ್ವೀಟ್ ಕಾರ್ನ್ ಮತ್ತು ಅವೊಕಾಡೋಗಳಲ್ಲಿ ಕೀಟನಾಶಕಗಳ ಪ್ರಮಾಣ ಅತ್ಯಂತ ಕಡಿಮೆ ಇತ್ತು. ಸ್ಟ್ರಾಬೆರಿಯಲ್ಲಿ ಸುಮಾರು 20 ಬಗೆಯ ಕ್ರಿಮಿನಾಶಕಗಳು ಪತ್ತೆಯಾಗಿವೆ. ಪಾಲಕ್ ಸೊಪ್ಪು, ಸ್ಟ್ರಾಬೆರಿ ನಂತರದ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಪ್ರತಿವರ್ಷಕ್ಕೆ ಒಬ್ಬ ವ್ಯಕ್ತಿ ಕಡಿಮೆ ಅಂದ್ರೂ 8 ಪೌಂಡ್ ನಷ್ಟು ಸ್ಟ್ರಾಬೆರಿ ತಿನ್ನುತ್ತಾರೆ. ಅವನ್ನು ತೊಳೆದು ಸ್ವಚ್ಛಗೊಳಿಸಿದ್ರೂ ಕೀಟನಾಶಕಗಳ ಅಪಾಯ ಇದ್ದೇಇರುತ್ತದೆ ಎಂಬುದು ಸಂಶೋದನೆಯಲ್ಲಿ ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ