ಕುರು ನೋವಿನಿಂದ ಬಳಲುತ್ತಿದ್ದೀರಾ...?ಇಲ್ಲಿದೆ ನೋಡಿ ಮನೆಮದ್ದು

ಬುಧವಾರ, 24 ಜನವರಿ 2018 (07:16 IST)
ಬೆಂಗಳೂರು : ಕೆಲವರ ಕಾಲಲ್ಲಿ ಕುರು ಆಗುವುದು ಕಂಡುಬರುತ್ತದೆ. ಅದು ತುಂಬಾ ನೋವನ್ನುಂಟುಮಾಡುತ್ತದೆ. ಇದು ಕಾಲಲ್ಲಿ ಬಂದರೆ ನಡೆಯಲು ಕೂಡ ಆಗುವುದಿಲ್ಲ. ಇದಕ್ಕೆ ಮನೆಯಲ್ಲಿ ಔಷಧಿಗಳನ್ನು ತಯಾರಿಸಿ ಹಚ್ಚಿದರೆ ಬೇಗನೆ ವಾಸಿಯಾಗುತ್ತದೆ.


ಈರುಳ್ಳಿಯನ್ನು ರೌಂಡಾಗಿ ಕಟ್ ಮಾಡಿ ಕುರು ಇರುವ ಜಾಗದಲ್ಲಿ ಇಟ್ಟು ಒಂದು ಬಟ್ಟೆಯನ್ನು ಅದರ ಮೇಲೆ ಕಟ್ಟಿ. ಇದನ್ನು ಹೀಗೆ 2-3 ದಿನ ಮಾಡಿದರೆ ಕುರು ಗುಣವಾಗುತ್ತದೆ. ಇದನ್ನು ಕುರು ಶುರುವಾಗುವಾಗ ಮಾಡುವ ಮನೆಮದ್ದು.
ಜೀರಿಗೆ ಪುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ ಕುರು ಇರುವ ಜಾಗಕ್ಕೆ ಹಚ್ಚಿ ಬಟ್ಟೆಕಟ್ಟಿ. ಇದನ್ನು ದಿನದಲ್ಲಿ 2-3 ಬಾರಿ ಮಾಡಿದರೆ ಕುರು ಕಡಿಮೆಯಾಗುತ್ತದೆ.


ವಿಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿಮಾಡಿ ಕುರು ಜಾಗಕ್ಕೆ ಅದನ್ನು ಇಟ್ಟು ಬಟ್ಟೆಕಟ್ಟಿ. ಇದನ್ನು ಪ್ರತಿದಿನ 2-3 ಸಾರಿ ಮಾಡಿ.


ಕಹಿಬೇವಿನ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ಕುರು ಇರುವ ಜಾಗಕ್ಕೆ ಹಚ್ಚಿ ಬಟ್ಟೆಕಟ್ಟಿ. ಹೀಗೆ 2-3 ದಿನ ಮಾಡಿದರೆ ಕುರು ಬೇಗನೆ ವಾಸಿಯಾಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ