ಪೊದೆಯ ರೂಪದಲ್ಲಿ ಬೆಳೆಯುವ ಹುತ್ತತ್ತಿ ಗಿಡಕ್ಕಿದೆ ಈ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ
ಶನಿವಾರ, 5 ಮೇ 2018 (06:30 IST)
ಬೆಂಗಳೂರು :ಹುತ್ತತ್ತಿಯುಪೊದೆಯ ರೂಪದಲ್ಲಿ ಬೆಳೆಯುತ್ತದೆ. ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ಎಲ್ಲಾ ಭಾಗದಲ್ಲೂ ಇರುತ್ತದೆ. ಎಲೆಯು 2-5 ಸೆಂ.ಮೀ. ಉದ್ದವಾಗಿದ್ದು ಅಂಡಾಕಾರ ಅಥವಾ ದುಂಡಗಿನ ಆಕಾರದಲ್ಲಿ ಇರುತ್ತದೆ. ಎಲೆಯ ಅಂಚು ಹಲ್ಲಿನಂತೆ ಇರುತ್ತದೆ. ಇದರ ಹೂವು ಹಳದಿ ಬಣ್ಣದ್ದಾಗಿದ್ದು, ಸಣ್ಣದಾಗಿರುತ್ತದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತದೆ. ಹುತ್ತತ್ತಿಯ ಎಲ್ಲಾ ಭಾಗವನ್ನು ಅನೇಕ ರೋಗಗಳಿಗೆ ಔಷಧವಾಗಿ ಉಪಯೋಗಿಸಬಹುದಾಗಿದೆ.
ಬೇರಿನ ಕಷಾಯವನ್ನು ಹಲವು ಬಗೆಯ ಜ್ವರ ನಿವಾರಕವಾಗಿ ಬಳಸಲಾಗುತ್ತದೆ. ಅಸ್ಥಮಾ, ಶೀತ, ಕೆಮ್ಮು ಮುಂತಾದವುಗಲನ್ನು ನಿವಾರಿಸಲು ಹುತ್ತತ್ತಿಯು ಸಹಾಯಕವಾಗಿದೆ. ಇದರ ಚೂರ್ಣವು ಅನೇಕ ಸ್ತ್ರೀರೋಗಗಳನ್ನು, ನರದೌರ್ಬಲ್ಯವನ್ನು ನಿವಾರಿಸುತ್ತದೆ. ಬೇರಿನ ರಸವನ್ನು ಗಾಯಕ್ಕೆ ಉಪಯೊಗಿಸಬಹುದಾಗಿದೆ. ಬೇರಿನ ತೊಗಟೆಯನ್ನು ಎಳ್ಳೆಣ್ಣೆ ಮತ್ತು ಹಾಲಿನೊಂದಿಗೆ ಸೇವಿಸುವುದರಿಂದ ಪಾರ್ಶ್ವವಾಯುವನ್ನು ಗುಣಮುಖಗೊಳೀಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ