ಪತಿ ನಮ್ಮ ಲೈಂಗಿಕತೆಯ ಬಗ್ಗೆ ತಮ್ಮ ಸ್ನೇಹಿತರೊಂದಿಗೆ ಚರ್ಚಿಸುತ್ತಾರೆ
ಶನಿವಾರ, 28 ಸೆಪ್ಟಂಬರ್ 2019 (07:58 IST)
ಬೆಂಗಳೂರು : ಪ್ರಶ್ನೆ : ನನಗೆ 30 ವರ್ಷ. ಇತ್ತೀಚೆಗೆ ಮದುವೆಯಾಯಿತು. ನನ್ನ ಪತಿ ನಮ್ಮ ಲೈಂಗಿಕತೆಯ ಬಗ್ಗೆ ತಮ್ಮ ಸ್ನೇಹಿತರೊಂದಿಗೆ ಚರ್ಚಿಸುತ್ತಾರೆ. ಇದು ನನಗೆ ಬೇಸರವನ್ನುಂಟು ಮಾಡಿದೆ. ಅದಕ್ಕೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳುವುದು ಹೇಗೆ?
ಉತ್ತರ : ಪತಿ ಎಂತಹ ವಿಚಾರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾನೆ ಎಂದು ಮೊದಲು ನೋಡಿ. ಒಂದು ವೇಳೆ ಆತ ನಿಮ್ಮಿಂದ ತೃಪ್ತಿ ಸಿಗುತ್ತಿಲ್ಲ ಎನ್ನುವ ರೀತಿಯಲ್ಲಿ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದರೆ, ನೀವೇ ಪತಿ ಜತೆ ಕೂತು ಮಾತನಾಡಿ ಇದಕ್ಕೆ ಕಾರಣ ಪತ್ತೆ ಮಾಡಿ. ಆತನಿಗೆ ನೀವು ಯಾವ ರೀತಿ ಇದ್ದರೆ ಇಷ್ಟ ಎಂದು ತಿಳಿದುಕೊಂಡು ನಿಮ್ಮ ಇಷ್ಟವನ್ನೂ ಹಂಚಿಕೊಳ್ಳಿ.
ಒಂದು ವೇಳೆ ನಿಮ್ಮ ಜತೆ ಕಳೆದ ರಸ ನಿಮಿಷಗಳನ್ನು ಸ್ನೇಹಿತರ ಜತೆ ವರ್ಣಿಸುತ್ತಾನೆಂದರೆ, ಸ್ನೇಹಿತರಿಗಿಂತ ಮೊದಲು ನೀವೇ ಪತಿಯ ಉತ್ತಮ ಸ್ನೇಹಿತರಾಗಿ! ಆತ ರಸಗಳಿಗೆಗಳ ಕುರಿತು ನಿಮ್ಮ ಜತೆಯೇ ಮೆಲುಕು ಹಾಕುವಂತಹ ವಾತಾವರಣ ನಿರ್ಮಿಸಿ. ನೀವು ಕಳೆದ ಕ್ಷಣಗಳನ್ನು ಹಂಚಿಕೊಳ್ಳಲು ಅವಕಾಶ ಕೊಡಿ.