ಜೀರ್ಣಕ್ರಿಯೆಗೆ ಸಹಕಾರಿ ಈ ಆಹಾರ

ಶುಕ್ರವಾರ, 15 ಮೇ 2020 (08:08 IST)

ಬೆಂಗಳೂರು: ಕೆಲವರಿಗೆ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಏನೇ ತಿಂದರೂ ಜೀರ್ಣವಾಗದೆ ಹೊಟ್ಟೆ ನೋವು ಬರುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಆಹಾರಗಳನ್ನು ಸೇವಿಸಿ.

 

ಓಟ್ಸ್ ಸೇವಿಸುವುದರಿಂದ ಕರುಳಿನ ಕ್ರಮಬದ್ಧ ಜೀರ್ಣಕ್ರಿಯೆ ಜೊತೆಗೆ ಮಲಬದ್ಧತೆ ನಿವಾರಣೆಯಾಗುತ್ತದೆ. ಹಾಗೇ ಮೊಸರು ಸೇವಿಸುವುದರಿಂದಲೂ ಕೂಡ ಅಜೀರ್ಣ, ಅತಿಸಾರ, ಮಲಬದ್ಧತೆಯಂತಹ ಸಮಸ್ಯೆ ದೂರವಾಗುತ್ತದೆ.
 

ಬೀಟ್ ರೋಟ್ , ಸೇಬು, ಬಾಳೆಹಣ್ಣು ಜೀರ್ಣಕ್ರಿಯೆಗೆ ಉತ್ತಮ ಆಹಾರ. ಇವು ಟಾಕ್ಸಿನ್ಸ್ ಹೀರಿಕೊಳ್ಳುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಬಾಳೆಹಣ‍್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್  ಅಂಶ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ