ಪುರುಷರಲ್ಲಿ ವೀರ್ಯಾಣು ಕೊರತೆ ಇದೆಯಂದು ಈ ಲಕ್ಷಣಗಳಿಂದ ತಿಳಿಯಬಹುದು
ಮಂಗಳವಾರ, 11 ಜೂನ್ 2019 (07:17 IST)
ಬೆಂಗಳೂರು : ಇಂದಿನ ದಿನಗಳಲ್ಲಿ ಬಹಳಷ್ಟು ಮಂದಿ ಗಂಡಸರು ವೀರ್ಯ ಕಣಗಳ ಕೊರತೆಯಿಂದ ಬಳಲುತ್ತಿರುತ್ತಾರೆ. ಇದು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ, ಬದಲಾದ ಜೀವನಶೈಲಿ, ವಾತಾವರಣದಲ್ಲಾಗುವ ಏರುಪೇರು, ಕೆಟ್ಟ ಚಟಗಳು ಮುಂತಾದವುಗಳಿಂದ ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ಸಾಮರ್ಥ್ಯ ಕುಂಠಿತವಾಗುತ್ತದೆ. ಈ ವೀರ್ಯಾಣು ಕೊರತೆ ತಮಗೆ ಇದೆಯೇ ಎಂಬುದನ್ನು ಪುರುಷರು ಕೆಲವು ಲಕ್ಷಣಗಳಿಂದ ಕಂಡುಕೊಳ್ಳಬಹುದು.
*ಹಾರ್ಮೋನುಗಳ ಅಸಮತೋಲನದಿಂದ ವೀರ್ಯ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಮುಖದ ಮೇಲಿರುವ ರೋಮಗಳು ಕಡಿಮೆಯಾಗಿದ್ದರೆ ಅಥವಾ ಬೆಳೆಯದೇ ಇದ್ದರೆ ಅಂತವರಲ್ಲಿ ವೀರ್ಯಾಣು ಕೊರತೆ ಇದೆ ಎಂದರ್ಥ.
*ಯಾವ ಪುರುಷರಲ್ಲಿ ಕ್ಷೀಣಿಸಿದ ಸ್ವರ ಇರುತ್ತದೆಯೋ ಅಂತಹ ಪುರುಷರಲ್ಲಿ ವೀರ್ಯಾಣುಗಳ ಕೊರತೆ ಇರುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.
*ಒಬ್ಬ ವ್ಯಕ್ತಿಯ ಸ್ನಾಯುಗಳು ಪರಿಪೂರ್ಣವಾಗಿ ಅಭಿವೃದ್ಧಿಯಾಗಿರದಿದ್ದಲ್ಲಿ ಅವರಲ್ಲಿ ವೀರ್ಯ ಕಣಗಳ ಸಂಖ್ಯೆ ಕುಂಠಿತವಾಗಿರುತ್ತದೆಯಂತೆ.
*ಸ್ಖಲನವಾದಾಗ ಕಡಿಮೆ ಸಾಂದ್ರತೆಯಿಂದ ವೀರ್ಯ ಹೊರಬಂದರೆ ಅಂತವರಿಗೆ ವೀರ್ಯಾಣು ಕೊರತೆ ಇರುತ್ತದೆಯಂತೆ. ತುಂಬಾ ಆಯಾಸವಾಗುವ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆ ಇರುತ್ತದೆಯಂತೆ