ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ಪರಿಹಾರ ಈ ಕರಿಬೇವು!

ಶನಿವಾರ, 21 ಏಪ್ರಿಲ್ 2018 (05:47 IST)
ಬೆಂಗಳೂರು : ನಾವು ನಮ್ಮ ಸೌಂದರ್ಯದ ಕಾಳಜಿಯಲ್ಲಿ ಮೊದಲನೇ ಸ್ಥಾನ ನೀಡುವುದು ಕೇಶ ರಾಶಿಗೆ, ಹೌದು ಹದಗೆಟ್ಟಿರುವ ವಾತಾವರಣದಿಂದಾಗಿ ಕೂದಲು ಉದುರುವಿಕೆ, ಸಿಲುಕುದಲು, ಒಣ ಕೂದಲು, ವಯಸ್ಸಾಗಕ್ಕೂ ಮುನ್ನ ಬೆಳ್ಳಗಾಗುವುದು, ಹೀಗೆ ಕೂದಲಿನ ಹತ್ತಾರು ಸಮಸ್ಸೆಗಳು ನಮ್ಮನ್ನ ಕಾಡುತ್ತಿರುತ್ತವೆ. ಇವುಗಳೆಲ್ಲದಕ್ಕೂ ಸುಲಭವಾಗಿ ಸಿಗುವ ಕರಿಬೇವಿನಲ್ಲಿ ಪರಿಹಾರವಿದೆ.


ಕರಿಬೇವಿನಲ್ಲಿ ಹೆಚ್ಚಿನ ವಿಟಮಿನ್ ಗಳು ಇರುವುದರಿಂದ ಇದು ನಮ್ಮ ಇಹಕ್ಕೂ, ಸೌಂದರ್ಯಕ್ಕೂ ಬಹಳ ಉಪಯುಕ್ತಕಾರಿ, ಕೂದಲಿಗೆ ಬೇಕಾದಂತಹ ಪೋಷಕಾಂಶಗಳು ಕರಿಬೇವಿನಲ್ಲಿವೆ. ಕರಿಬೇವಿನಿಂದ ಎಣ್ಣೆಯನ್ನ ತಯಾರಿಸಿ ಕೂದಲಿಗೆ ಹಚ್ಚಬೇಕು. ಕರಿಬೇವನ್ನು ಜಜ್ಜಿ ರಸ ತೆಗೆಯ ಬೇಕು, ನಾಲ್ಕು ಚಮಚ ಕೊಬ್ಬರಿ ಎಣ್ಣೆಗೆ ಒಂದು ಚಮಚ ಕರಿಬೇವಿನ ರಸ ಹಾಕಿ ಒಲೆಯ ಮೇಲಿಟ್ಟು ಕಾಯಿಸ ಬೇಕು. ( ನೀರಿನಂಶ ಹೋಗುವ ವರೆಗೆ ) ತಯಾರಿಸಿದ ಎಣ್ಣೆಯನ್ನು ತಿಂಗಳವರೆಗೆ ಇಡಬಹುದು.
ಎಣ್ಣೆ ಆರಿದ ನಂತರ ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳ ಬೇಕು. ಒಂದೆರಡು ತಾಸಿನ ನಂತರ ಕೂದಲನ್ನ ತೊಳೆಯಬೇಕು, ಹೀಗೆ ವಾರಕ್ಕೆ ಎರಡರಿಂದ ಮೂರೂ ಭಾರಿ ಮಾಡುವುದರಿಂದ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ