ಅವರೆಕಾಳಿನಿಂದ ಮಾಡಿ ಈ ರುಚಿಕರವಾದ ಪೊಂಗಲ್

ಸೋಮವಾರ, 31 ಆಗಸ್ಟ್ 2020 (08:03 IST)
ಬೆಂಗಳೂರು : ಅವರೆಕಾಳಿನಿಂದ ಹಲವು ಬಗೆಯ ತಿಂಡಿ, ಸಾಂಬಾರುಗಳನ್ನು ತಯಾರಿಸುತ್ತಾರೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಅವರೆಕಾಳಿನಿಂದ ಪೊಂಗಲ್ ತಯಾರಿಸುವುದು ಹೇಗೆಂದು ನೋಡೋಣ.

ಬೇಕಾಗುವ ಸಾಮಾಗ್ರಿಗಳು : 1 ಕಪ್ ಅಕ್ಕಿ, ½ ಕಪ್ ಹೆಸರುಬೇಳೆ, 3 ಹಸಿಮೆಣಸಿನ ಕಾಯಿ, ½ ಕಪ್ ಅವರೆಕಾಳು, ½ ಚಮಚ ತುರಿದ ಶುಂಠಿ, ಕರಿಬೇವು, ½ ಚಮಚ ಅರಶಿನ, ಉಪ್ಪು, ¼ ಕಪ್ ತೆಂಗಿನಕಾಯಿ ತುರಿ, ತುಪ್ಪ, ಸಾಸಿವೆ, ಜೀರಿಗೆ, ಕರಿಮೆಣಸು, 6ಗೋಡಂಬಿ.

ಮಾಡುವ ವಿಧಾನ : ಅಕ್ಕಿ, ಹೆಸರುಬೇಳೆ, ಅರಿಶಿನ ಪುಡಿ, ಕರಿಬೇವು, ಶುಂಠಿ, ಹಸಿಮೆಣಸಿನಕಾಯಿ, ನೀರನ್ನು ಹಾಕಿ ಬೇಯಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಮೆಣಸು, ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ. ಬಳಿಕ ಕರಿಬೇವು ಹಾಕಿ ಮಿಶ್ರಣ ಮಾಡಿ ಅದನ್ನು ಬೇಯಿಸಿದ ಅಕ್ಕಿ, ಬೇಳೆ ಮಿಶ್ರಣಕ್ಕೆ ಹಾಕಿ. ಅದಕ್ಕೆ ತುರಿದ ತೆಂಗಿನಕಾಯಿ, ತುಪ್ಪ ಮಿಕ್ಸ್ ಮಾಡಿ ಕುದಿಸಿದರೆ ಅವರೆಕಾಳು ಪೊಂಗಲ್ ರೆಡಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ