ಈ ರೋಗ ಬಂದರೆ ಸೆಕ್ಸ್ ಗೆ ಕತ್ತರಿ ಗ್ಯಾರಂಟಿ!

ಶನಿವಾರ, 23 ಡಿಸೆಂಬರ್ 2017 (08:41 IST)
ಬೆಂಗಳೂರು: ಲೈಂಗಿಕ ಜೀವನ ಸುಗಮವಾಗಿ ನಡೆಯಬೇಕೆಂದರೆ ಆರೋಗ್ಯವೂ ಮುಖ್ಯ. ಆದರೆ ಕ್ಯಾನ್ಸರ್ ರೋಗ ಪತ್ತೆಯಾದ ವ್ಯಕ್ತಿಗಳಲ್ಲಿ ಲೈಂಗಿಕ ಜೀವನ ಕುಂಠಿತವಾಗುತ್ತದೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ.
 

ಹೋಸ್ಟನ್ ವಿವಿಯ ಸಂಶೋಧಕರ ಅಭಿಪ್ರಾಯದಂತೆ ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ರೋಗ ಪತ್ತೆಯಾದರೆ ಆತನ ಲೈಂಗಿಕ ಜೀವನ ಹಾದಿ ತಪ್ಪುತ್ತದೆ. ಆತನಲ್ಲಿ ಲೈಂಗಿಕಾಸಕ್ತಿ ತಾನಾಗಿಯೇ ಕುಗ್ಗುತ್ತದೆ ಅಥವಾ ಲೈಂಗಿಕ ಜೀವನಕ್ಕೆ ಕತ್ತರಿ ಬೀಳುತ್ತದೆ.

ಸುಮಾರು 18 ರಿಂದ 39 ವರ್ಷ ವಯಸ್ಸಿನವರ ಮೇಲೆ ಸಮೀಕ್ಷೆ ನಡೆಸಿದ ಅಧ್ಯಯನ ತಂಡ ಈ ಅಭಿಪ್ರಾಯಕ್ಕೆ ಬಂದಿದೆ. ಕೇವಲ ಸೆಕ್ಸ್ ಮಾತ್ರವಲ್ಲ, ಕ್ಯಾನ್ಸರ್ ಎನ್ನುವುದು ಮಾನವನ ಸಹಜ ಜೀವನವನ್ನು ಕಸಿದುಕೊಳ್ಳುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ