ಮಹಿಳೆಯರಿಗೆ ಕಾಮುಕರಿಂದ ರಕ್ಷಿಸಿಕೊಳ್ಳಲು ನೆರವಾಗುತ್ತೇ ಈ ಇಂಟ್ರೆಸ್ಟಿಂಗ್ ಡಿವೈಸ್
ಮಂಗಳವಾರ, 19 ಮಾರ್ಚ್ 2019 (10:26 IST)
ಬೆಂಗಳೂರು : ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಮಹಿಳೆಯರು ಈ ಪ್ರಕರಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಒಂದು ಇಂಟ್ರೆಸ್ಟಿಂಗ್ ಡಿವೈಸ್ ಕಂಡುಹಿಡಿದಿದ್ದಾರೆ.
ಎಂಐಟಿಯ ಭಾರತೀಯ ವಿಜ್ಞಾನಿ ಮನೀಶಾ ಮೋಹನ್ ಈ ಇಂಟ್ರೆಸ್ಟಿಂಗ್ ಡಿವೈಸ್ ಕಂಡುಹಿಡಿದಿದ್ದು, ಇದನ್ನು ಮಹಿಳೆರು ಸೇಫ್ಟೀ ಅಲ್ಲದ ಸ್ಥಳಗಳಿಗೆ ಹೋಗುವಾಗ ಧರಿಸಿದರೆ ಕಾಮುಕರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯಕವಾಗುವುದು ಎಂಬುದಾಗಿ ತಿಳಿಸಿದ್ದಾರೆ. ಅಂದಹಾಗೆ ಈ ಡಿವೈಸ್ ಹೇಗೆ ವರ್ಕ್ ಆಗುತ್ತೆ? ಇದನ್ನ ಬಳಸೋದಾದ್ರೂ ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.
ಈ ಇಂಟ್ರೆಪಿಡ್ ಡಿವೈಸ್ನ್ನು ಮಹಿಳೆಯರು ತಮ್ಮ ಒಳಉಡುಪುಗಳಲ್ಲಿ ಜಸ್ಟ್ ಅಟ್ಯಾಚ್ ಮಾಡಿ ಅವರಿಗೆ ಸೇಫ್ಟೀ ಅಲ್ಲದ ಸ್ಥಳಗಳಿಗೆ ಹೋಗುವಾಗ ಧರಿಸಬೇಕು. ಹಾಗೇನೆ ಆ ಡಿವೈಸ್ ನ್ನು ನಿಮ್ಮ ಹತ್ತಿರದ ಆತ್ಮೀಯ ಅಥವಾ ತೀರಾ ಹೆಲ್ಸ್ ಮಾಡುವ ಸ್ನೇಹಿತರು, ಹೆತ್ತವರ ಮೊಬೈಲ್ ಗೆ ಆಪ್ಲಿಕೇಶನ್ ನೊಂದಿಗೆ ಕನೆಕ್ಟ್ ಮಾಡಿಕೊಳ್ಳಬಹುದು. ಹೀಗೆ ಮಾಡೋದರಿಂದ ಯಾರಾದ್ರೂ ಫೋರ್ಸ್ ಫುಲ್ ಆಗಿ ನಿಮ್ಮ ಬಟ್ಟೆಗಳನ್ನ ಎಳೆದಾಡಿದಾಗ ಈ ಆಪ್ಲಿಕೇಶನ್ ಸಂಯೋಜಿತವಾಗಿರುವ ಬ್ಲೂಟೂತ್ ಸಾಧನ ನೀವು ಕನೆಕ್ಟ್ ಮಾಡಿದಂಥಹ ಅಷ್ಟು ಮೊಬೈಲ್ ನಂಬರ್ ಗಳಿಗೆ ಐ ಆಮ ಅಟ್ ರಿಸ್ಕ್, ಪ್ಲೀಸ್ ಸೇವ್ ಮೀ ಅಂತ ಎಚ್ಚರಿಕೆಯ ಮೆಸೇಜ್ಗಳನ್ನು ಮತ್ತು ನೀವಿರುವ ಸ್ಥಳದ ಮಾಹಿತಿಯನ್ನು ಅಟೋಮ್ಯಾಟಿಕ್ ಆಗಿ ತೋರಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.