ಪುರುಷರೇ ಎಚ್ಚರ. ನಿಮ್ಮ ಈ ಸಣ‍್ಣ ತಪ್ಪು ಕೂದಲುದುರುವ ಸಮಸ್ಯೆಗೆ ಕಾರಣವಾಗಬಹುದು

ಸೋಮವಾರ, 25 ಮಾರ್ಚ್ 2019 (06:57 IST)
ಬೆಂಗಳೂರು : ಮಿಟಮಿನ್ ಕೊರತೆ, ನಿದ್ರಾಹೀನತೆಯಿಂದ ಪುರುಷರಲ್ಲಿ ಕೂದಲುದುರುವ ಸಮಸ್ಯೆ ಕಂಡುಬರುತ್ತದೆ.  ಆದರೆ ಕೆಲವೊಮ್ಮೆ ಪುರುಷರು ಮಾಡುವ ಕೆಲವು ಸಣ್ಣತಪ್ಪುಗಳು ಕೂಡ ಕೂದಲುದುರುವ ಸಮಸ್ಯೆಗೆ  ಕಾರಣವಾಗುತ್ತದೆ.ಅವು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳಿ.

*ಬಿಸಿಯಾಗಿರುವ ನೀರಿನಿಂದ ತಲೆಸ್ನಾನ ಮಾಡಿದರೆ ಕೂದಲುದುರುವ ಸಮಸ್ಯೆ ಕಾಡುತ್ತದೆ. ಆದ್ದರಿಂದ ಉಗುರುಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ತಲೆಸ್ನಾನ ಮಾಡಿ.

 

*ಪ್ರತಿದಿನ ತಲೆಸ್ನಾನ ಮಾಡಿದರೆ ಕೂದಲು ಹೆಚ್ಚಾಗಿ ಉದುರಿಹೋಗುತ್ತವೆ. ಆದ್ದರಿಂದ ವಾರದಲ್ಲಿ ಎರಡರಿಂದ ಮೂರು ಬಾರಿಯಷ್ಟೇ ತಲೆ ಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

 

*ಕಂಡೀಷನರ್ ಅತೀಯಾಗಿ ಬಳಸುವುದರಿಂದ ಕೂದಲಿಗೆ ಹಾನಿಯಾಗುತ್ತದೆ. ಹಾಗೇ ಆಗಾಗ ಕೂದಲನ್ನು ಮುಟ್ಟುವುದರಿಂದ ಕೂದಲು ಉದುರಿ ಹೋಗುತ್ತದೆ.

 

*ಕೂದಲಿನ ಸೌಂದರ್ಯ ವೃದ್ಧಿಸಲು ಕೆಮಿಕಲ್ ಯುಕ್ತ ಸೌಂದರ್ಯವರ್ಧಕಗಳನ್ನು ಬಳಸಿದರೂ ಕೂದಲು ಹಾಳಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ