ಈ ಸಮಸ್ಯೆಯಿರುವವರು ಶುಂಠಿ ತಿನ್ನುವುದು ಒಳ್ಳೆಯದಲ್ಲ

ಶನಿವಾರ, 1 ಸೆಪ್ಟಂಬರ್ 2018 (14:06 IST)
ಬೆಂಗಳೂರು : ಉತ್ತಮ ಮನೆಮದ್ದುಗಳಲ್ಲಿ ಒಂದಾದ ಶುಂಠಿ ಅಜೀರ್ಣ, ಶೀತ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ರಾಮಾಬಾಣವಾಗಿರಬಹುದು. ಆದರೆ ಇದು, ಕೆಲವರ ಆರೋಗ್ಯಕ್ಕೆ ಹಾನಿಕಾರಕವಾಗುವ ಸಾಧ್ಯತೆ ಇದೆ. ಹಾಗಾದ್ರೆ ಈ ಶುಂಠಿ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ.


* ಶುಂಠಿ ಜೀರ್ಣಕ್ರಿಯೆಗೆ ಸಹಾಯಮಾಡುತ್ತೆ, ಆದರೆ ಗರ್ಭಿಣಿಯರು ತಿಂದರೆ ಅವಧಿಪೂರ್ವ ಪ್ರಸವ ಆಗುವ ಸಾಧ್ಯತೆ ಹೆಚ್ಚು. ಅದರಲ್ಲೂ 6 ತಿಂಗಳ ಬಳಿಕ ಶುಂಠಿ ತಿನ್ನದಿರುವುದು ಒಳ್ಳೆಯದು. ಮೊದಲ ತ್ರೈಮಾಸಿಕದಲ್ಲಿ ಬೆಳಗ್ಗೆ ಕಾಡುವ ಸುಸ್ತು, ವಾಂತಿ ನಿವಾರಣೆಗೆ ಒಂದು ತುಂಡು ಶುಂಠಿ ತಿನ್ನಬಹುದು, ಆದರೆ ಹೀಗೆ ತಿನ್ನುವ ಮುನ್ನ ವೈದ್ಯರ ಸಲಹೆ ಕೇಳಿ.


* ಶುಂಠಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಹೀಮೋಫಿಲಿಯಾ(hemophilia) ಸಮಸ್ಯೆ ಇರುವವರಿಗೆ ಶುಂಠಿ ಒಳ್ಳೆಯದಲ್ಲ. ಈ ಸಮಸ್ಯೆ ಇರುವವರಿಗೆ ಚಿಕ್ಕ ಗಾಯವಾದರೂ ರಕ್ತ ಹರಿಯುವುದು ನಿಲ್ಲುವುದಿಲ್ಲ.


* ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಂತವರಿಗೆ ಶುಂಠಿ ಒಳ್ಳೆಯದಲ್ಲ.


* ಕಡಿಮೆ ಮೈ ತೂಕ ಇರುವವರು ಕೂಡ ಶುಂಠಿ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಶುಂಠಿ ಮತ್ತಷ್ಟು ತೂಕ ಕಡಿಮೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ