ಶುಗರ್ ಕಡಿಮೆ ಮಾಡಲು ಇದೊಂದು ಟಿಪ್ಸ್ ಪಾಲಿಸಿದರೆ ಸಾಕು

Krishnaveni K

ಮಂಗಳವಾರ, 19 ಮಾರ್ಚ್ 2024 (08:44 IST)
Photo Courtesy: Twitter
ಬೆಂಗಳೂರು: ಇಂದಿನ ದಿನ ಬಹುತೇಕರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಕಾರಣಗಳು ಅನೇಕ ಇರಬಹುದು. ಆದರೆ ಮಧುಮೇಹ ನಿಯಂತ್ರಿಸುವುದಕ್ಕೆ ಇಲ್ಲಿದೆ ಒಂದು ಸರಳ ಉಪಾಯ.

ಮಧುಮೇಹ ನಮ್ಮ ದೇಹವನ್ನು ನಿಧಾನವಾಗಿ ಕೊಲ್ಲುವ ರೋಗ. ಇದನ್ನು ಸೈಲಂಟ್ ಕಿಲ್ಲರ್ ಎಂದು ಸುಮ್ಮನೇ ಹೇಳಲ್ಲ. ಮಧುಮೇಹ ಹೆಚ್ಚಾದಂತೆ ನಮ್ಮ ದೇಹದ ಪ್ರಧಾನ ಅಂಗಗಳಾದ ಕಿಡ್ನಿ, ಪಿತ್ತಜನಕಾಂಗ, ಹೃದಯಕ್ಕೂ ಸಮಸ್ಯೆ ತಂದೊಡ್ಡಬಹುದು. ಹೀಗಾಗಿ ಇದನ್ನು ಒಂದು ಮಟ್ಟಕ್ಕೆ ನಿಯಂತ್ರಣದಲ್ಲಿಡುವುದು ಮುಖ್ಯ.

ಎಷ್ಟೇ ಔಷಧೋಪಚಾರಗಳನ್ನು ಮಾಡುತ್ತಿದ್ದರೂ ಅದರ ಜೊತೆಗೆ ಆಹಾರದಲ್ಲೂ ಕಟ್ಟುನಿಟ್ಟಾಗಿದ್ದರೆ ಮಾತ್ರ ಮಧುಮೇಹ ನಿಯಂತ್ರಿಸಲು ಸಾಧ್ಯ. ಮಧುಮೇಹ ನಿಯಂತ್ರಣಕ್ಕೆ ನಾವು ಮಾಡಬಹುದಾದ ಸಿಂಪಲ್ ಮನೆ ಮದ್ದಿಗೆ ಅಂಜೂರ ಬಹುಮುಖ್ಯವಾಗಿ ಬೇಕಾಗುತ್ತದೆ.

ಒಣ ಅಂಜೂರದಲ್ಲಿ ಜೀವಸತ್ವ, ಫೈಬರ್ ಅಂಶ ಹೇರಳವಾಗಿದ್ದು, ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅಂಜೂರವನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದನ್ನು ಅಭ್ಯಾಸ ಮಾಡಿ.  ದೇಹದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ, ನಮ್ಮ ಚಯಾಪಚಯವನ್ನೂ ಸುಗಮಗೊಳಿಸುವ ಶಕ್ತಿ ಇದಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ