ಕೂದಲು ಗಟ್ಟಿಯಾಗಿ, ಉದ್ದವಾಗಿ ಬೆಳೆಯಲು ಈ ಮರದ ಬೇರನ್ನು ಬಳಸಿ

ಗುರುವಾರ, 24 ಡಿಸೆಂಬರ್ 2020 (13:06 IST)
ಬೆಂಗಳೂರು : ಸೌಂದರ್ಯ ಚೆನ್ನಾಗಿರಬೇಕೆಂದರೆ ಅದರಲ್ಲಿ ಮುಖ, ದೇಹದ ಆಕಾರ, ಬಣ್ಣ ಮಾತ್ರವಲ್ಲ ಕೂದಲು ಕೂಡ ತುಂಬಾ ಮುಖ್ಯ. ಹಾಗಾಗಿ ವಯಸ್ಸಾದ ಮೇಲೂ ಕೂದಲು ಉದುರಿ ಹೋಗಬಾರದೆಂದರೆ ಈ ಮನೆಮದ್ದನ್ನು ಹಚ್ಚಿ.

ಕೂದಲು ಚೆನ್ನಾಗಿ ಇರಬೇಕೆಂದರೆ ಕೂದಲಿಗೆ ಪ್ರತಿದಿನ ಎಣ್ಣೆ ಹಚ್ಚಬೇಕು, ಕೂದಲಿನ ಬುಡ ಒಣಗಲು ಬಿಡಬಾರದು. ಹಾಗೇ  ತಲೆ ಸ್ನಾನ ಮಾಡುವ 1 ಗಂಟೆ ಮೊದಲು ದಾಸವಾಳ ಗಿಡದ ಎಲೆಗಳನ್ನು ಕುಟ್ಟಿ ಪೇಸ್ಟ್ ತಯಾರಿಸಿ ಅದಕ್ಕೆ ಬಾದಾಮಿ ಪುಡಿ ಅಥವಾ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಿ. ಇದರಿಂದ ಕೂದಲು ಗಟ್ಟಿಯಾಗಿ ಬೆಳೆಯುತ್ತವೆ.

ಹಾಗೇ ಕೂದಲು ಉದ್ದವಾಗಿ ಬೆಳೆಯಲು ಆಲದ ಮರದಲ್ಲಿ ಬೇರುಗಳನ್ನು ತಂದು ಒಣಗಿಸಿ ಪುಡಿ ಮಾಡಿ ತೆಂಗಿನೆಣ್ಣೆಯಲ್ಲಿ ಕುದಿಸಿ ಅದನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ