ಮುಖ ಆಯಿಲ್ ಸ್ಕೀನ್ ನಿಂದ ನಿವಾರಣೆಯಾಗಲು ಒಮ್ಮೆ ಈ ಫೇಸ್‍ಪ್ಯಾಕ್‍ಗಳನ್ನು ಬಳಸಿ ನೋಡಿ
ಭಾನುವಾರ, 28 ಅಕ್ಟೋಬರ್ 2018 (14:06 IST)
ಬೆಂಗಳೂರು : ಕೆಲವರು ಮುಖದ ಆಯಿಲ್ ಸ್ಕೀನ್ ನಿಂದ ಕಂಗೆಟ್ಟಿರುತ್ತಾರೆ. ಏನೇ ಮಾಡಿದರೂ ಈ ಆಯಿಲ್ ಸ್ಕೀನ್ ಹೋಗುವುದಿಲ್ಲವಲ್ಲ ಎಂದು ಬೇರಸಗೊಂಡಿರುವವರು ಈ ಆಯಿಲ್ ಸ್ಕೀನ್ ನಿವಾರಣೆಯಾಗಲು ಮನೆಯಲ್ಲೇ ಸಿಗೋ ಕೆಲ ವಸ್ತುಗಳಿಂದ ತಯಾರಿಸಬಹುದಾದ ಸಿಂಪಲ್ ಫೇಸ್‍ಪ್ಯಾಕ್‍ಗಳನ್ನು ಒಮ್ಮೆ ಬಳಸಿ ನೋಡಿ.
*ಕಡಲೆಹಿಟ್ಟು- ಮೊಸರು – ಕಿತ್ತಳೆ ಸಿಪ್ಪೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಕಪ್‍ಗೆ 1 ಚಮಚ ಕಡಲೆಹಿಟ್ಟು, 1 ಚಮಚ ಕಿತ್ತಲೆ ಸಿಪ್ಪೆಯ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.(ಒಣಗಿದ ಪುಡಿ ಇಲ್ಲವಾದ್ರೆ ಕಿತ್ತಲೆಹಣ್ಣಿನ ರಸ ಅಥವಾ ಹಸಿ ಕಿತ್ತಲೆ ಸಿಪ್ಪೆಯ ಪೇಸ್ಟ್ ಬಳಸಬಹುದು). ಒಮ್ಮೆ ಮುಖವನ್ನ ತೊಳೆದು, ಶುಭ್ರವಾದ ಬಟ್ಟೆಯಿಂದ ನೀರಿನಂಶ ಇಲ್ಲದಂತೆ ಒರೆಸಿ. ನಂತರ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಫೇಸ್‍ಪ್ಯಾಕ್ ಹಚ್ಚಿ 20 ನಿಮಿಷ ರಿಲ್ಯಾಕ್ಸ್ ಮಾಡಿ. ಫೇಸ್‍ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದು ರೋಸ್‍ವಾಟರ್ ಹಚ್ಚಿಕೊಳ್ಳಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ವ್ಯತ್ಯಾಸ ಕಾಣುತ್ತದೆ.
*ನಿಂಬೆ ರಸ ಹಾಗೂ ಜೇನುತುಪ್ಪ
ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆರಸ ಬೆರೆಸಿ ಫೇಸ್‍ಪ್ಯಾಕ್ ಮಾಡಿ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ
*ಸೌತೇಕಾಯಿ
2 ಚಮಚ ಸೌತೇಕಾಯಿ ರಸಕ್ಕೆ 1 ಚಮಚ ನಿಂಬೆರಸ ಬೆರೆಸಿ ಇದನ್ನ ಹತ್ತಿಯಲ್ಲಿ ತೆಗೆದುಕೊಂದು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಮುಖ ತೊಳೆಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.